ಗುಡ್ಡಳ್ಳಿಗೆ ರಸ್ತೆ ಮಾಡಿಕೊಡುವಂತೆ ಕೈಗಾ ಅಧಿಕಾರಿಗಳಿಗೆ ಮನವಿ

AMBULENCE
Published on

ಕಾರವಾರ: ರಾಷ್ಟ್ರೀಯ  ಹೆದ್ದಾರಿ ಹಾದು ಹೋಗಿರುವುದರಿಂದ

ಅಪಘಾತಗಳು ಹೆಚ್ಚಾಗುತ್ತಿದ್ದು, ಎನ್.ಪಿ.ಸಿ.ಐ.ಎಲ್ ಕೈಗಾದವರು ಅಂಬ್ಯುಲೆನ್ಸ್ ನೀಡಿರುವುದು ಸ್ಥಳೀಯರಿಗೆ ಸಹಾಯವಾಗಲಿದೆ.

ಈ ಅಂಬ್ಯುಲೆನ್ಸ್ನ್ ಕೇವಲ ರೋಗಿಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಿ ಎಂದು ಕರ್ನಾಟಕ ರಾಜ್ಯ ಮಾರ್ಕೇಟಿಂಗ್ ಕನ್ಸಲೆಂಟ್ ಅಂಡ್

ಏಜೆನ್ಸಿಸ್ ಅಧ್ಯಕ್ಷ ಸತೀಶ್ ಸೈಲ್ ಹೇಳಿದರು.

ಅವರು ಸೋಮವಾರ ನಗರಸಭೆ ಆವರಣದಲ್ಲಿ, ಎನ್.ಪಿ.ಸಿ.ಐ.ಎಲ್ ಕೈಗಾ ಇವರಿಂದ ಅಂಬ್ಯುಲೆನ್ಸ್ ವಾಹನ ಹಸ್ತಾಂತರ

ಹಾಗೂ ಸರಕಾರದ ವಿವಿಧ ಯೋಜನೆಗಳ ಅನುದಾನದಿಂದ ವಿದ್ಯಾರ್ಥಿನಿಲಯಗಳಿಗೆ ಸಾಮಾಗ್ರಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೈಗಾದ ಎನ್.ಪಿ.ಸಿ.ಐ.ಎಲ್ ರವರು ಕಾರವಾರ ಅಭಿವೃದ್ಧಿಗೆ ಕೈ ಜೋಡಿಸುತ್ತಿದ್ದು, ಕಾರವಾರವು ಗುಡ್ಡಗಾಡು ಪ್ರದೇಶಗಳಿಂದ ಹೊಂದಿರುವುದರಿಂದ ಅಲ್ಲಿನ ಜನರು ಶವಸಂಸ್ಕಾರ ಮಾಡಲು ಅರಸಾಹಾಸ ಪಡುತ್ತಿದ್ದಾರೆ. ಅವರ ಅನುಕೂಲಕ್ಕಾಗಿ 4

ಗ್ರಾಮ ಪಂಚಾಯತ್‌ಗೆ ಒಂದರಂತೆ 4 ಮುಕ್ತಿ ವಾಹನ ಸಮೇತ ಚಾಲಕರನ್ನು ಒದಗಿಸುವಂತೆ ಎನ್.ಪಿ.ಸಿ.ಎಲ್ ಅಧಿಕಾರಿಗೆ ಮನವಿ

ಮಾಡಿದ ಅವರು, ಕಾರವಾರ ತಾಲೂಕಿನ ಗುಡ್ಡಳ್ಳಿಯು ಅಭಿವೃದ್ದಿಯಲ್ಲಿ ಹಿಂದೂಳಿದ ಕಾರಣ ನಗರಸಭೆ ವತಿಯಿಂದ ಬಾವಿ ವ್ಯವಸ್ಥೆ,

ಶಾಲೆಗೆ ಪೆಂಟ್ ಮಾಡಿಸಲಾಗಿದೆ, ಅಂಗನವಾಡಿ ನಿರ್ಮಿಸಲಾಗಿದೆ. ಸಮಮರ್ಪಕ ರಸ್ತೆ ಇಲ್ಲದೇ ಅಲ್ಲಿನ ಜನರು ವಿದ್ಯಾರ್ಥಿಗಳು ಓಡಾಡಲು

ತೊಂದರೆ ಅನುಭವಿಸುತ್ತಿದ್ದಾರೆ.  ಒಮ್ಮೆ ಭೇಟಿ ನೀಡಿ ಪರಿಶೀಲಿಸಿ ಸಮರ್ಪಕ ರಸ್ತೆಯನ್ನು ಕೈಗಾದ ಎನ್.ಪಿ.ಸಿ.ಎಲ್

ವತಿಯಿಂದ ನಿರ್ಮಿಸುವಂತೆ ಎನ್‌ಪಿ ಸಿಎಲ್ ಅಧಿಕಾರಿಗಳಿಗೆ ತಿಳಿಸಿದ ಅವರು ಮಾ.23 ಕ್ಕೆ ಕೈಗಾದವರು ಗುಡ್ಡಳ್ಳಿಗೆ ಪರಿಶೀಲನೆಗೆ

ಬರಲಿದ್ದು ನಗರಸಭೆ ಸದಸ್ಯರು ಭಾಗಿಯಾಗುವಂತೆ ಸೂಚಿಸಿದರು.

ನಗರಸಭೆ ವ್ಯಾಪ್ತಿಯ ಸೀಬರ್ಡ್ ಮನೆಗಳಿಂದ ಕರ ಸಂಗ್ರಹಿಸುವ ಕುರಿತು ನೋಟಿಸ್ ನೀಡುವಂತೆ ಅಧಿಕಾರಿಗಳಗೆ ಸೂಚಿಸಿದ

ಅವರು, ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೈಗಾದ ಎನ್.ಪಿ.ಸಿ.ಐ.ಎಲ್‌ನಲ್ಲಿ 50 ಕಿಮೀ ವ್ಯಾಪ್ತಿಯಲ್ಲಿರುವ ಐಟಿಐ,

ಡಿಪ್ಲೋಮಾ ಬಿ.ಎಸ್.ಸಿ. ನರ್ಸಿಂಗ್ ವಿದ್ಯಾರ್ಥಿಗಳಿಂದ 300 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ ಎಂದರು.

ಎನ್.ಪಿ.ಸಿ.ಐ.ಎಲ್ ಕೈಗಾ ಸೈಟ್ ಡೈರೆಕ್ಟರ್ ಬಚು ವಿನೋದಕುಮಾರ ಮಾತನಾಡಿ, ಕೈಗಾದ ಪ್ರಾಜೆಕ್ಟ ಸಿಎಸ್‌ಆರ್

ಅನುದಾನದಡಿ ಕೈಗಾ ವ್ಯಾಪ್ತಿಯ ಪ್ರದೇಶಗಳನ್ನು ಅಭಿವೃದ್ದಿ ಪಡಿಸುತ್ತಿದ್ದು, ಶಿಕ್ಷಣ ಆರೋಗ್ಯ, ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು

ನೀಡಲಾಗುತ್ತಿದ್ದೆ. ಕಳೆದ ಬಾರಿ ಒಂದು ಅಂಬ್ಯುಲೆನ್ಸ್ ನೀಡಲಾಗಿದ್ದು, ಈ ಬಾರಿಯು ಒಂದು ಅಂಬ್ಯುಲೆನ್ಸ್ ನೀಡಲಾಗಿದೆ. ಪ್ರತಿ

ವರ್ಷದಲ್ಲಿ ಸುಮಾರು 10-15 ಕೋಟಿ ಹಣವನ್ನು ಕೈಗಾ ವ್ಯಾಪ್ತಿ ಬರುವ ಹಳ್ಳಿಗಳ ಜನ ಸಾಮ್ಯಾನರಿಗೆ ಸಹಾಯಮಾಡುವ

ದೃಷ್ಟಿಯಿಂದ ಹಾಗೂ ಅಭಿವೃದ್ಧಿಗೆ ಖರ್ಚುಮಾಡಲಾಗುತ್ತಿದೆ. ಕಾರವಾರ ನಗರಸಭೆಯು ಈ ಅಂಬ್ಯುಲೆನ್ಸ್ನ

ಸದುಪಯೋಗಪಡಿಸಿಕೊಂಡು ಸುತ್ತುಮುತ್ತಲಿನ ಪ್ರದೇಶದ ಜನರಿಗೆ ನೇರವಾಗವಂತೆ ಕಾರ್ಯನಿರ್ವಹಿಸಲಿ ಎಂದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಡಿ ಉಳ್ವೇಕರ ಮಾತನಾಡಿ, ಕಾರವಾರ ನಗರಸಭೆಯು ಗ್ರಿನ್ ಕಾರವಾರ ಕ್ಲಿನ್

ಕಾರವಾರ ಎಂದು ಗುರುತಿಸಿಕೊಂಡಿದೆ. ಎನ್.ಪಿ.ಸಿ.ಐ.ಎಲ್ ವತಿಯಿಂದ ಕಳೆದ ಬಾರಿ 4 ಘನತ್ಯಾಜ ವಿಲೇವಾರಿ ವಾಹನಗಳನ್ನು

ನೀಡಲಾಗಿದ್ದು, ಈ ಬಾರಿ ಅಂಬ್ಯುಲೆನ್ಸ್ ನೀಡಲಾಗಿದೆ ಕಾರವಾರ ಅಭಿವೃದ್ಧಿ ಹೊಂದಲು ಎನ್.ಪಿ.ಸಿ.ಐ.ಎಲ್ ಹಾಗೂ ಬಿಲ್ಟ್ ಕಂಪನಿ

ಸೇರಿದಂತೆ ಹಲವಾರು ಕಂಪನಿಗಳು ನಗರಸಭೆ ಅಭಿವೃದ್ಧಿಗೆ ಕೈ ಜೋಡಿಸುತ್ತಿದ್ದಾರೆ ಮುಂದೆ ಕೂಡ ಎಲ್ಲಾ ಕಂಪನಿಗಳು ಕೈಜೋಡಿಸಿ

ಕಾರವಾರ ನಗರವನ್ನು ಸುಂದರ ನಗರವನ್ನಾಗಿ ಮಾಡಬೇಕು ಎಂದರು.

ನಗರಸಭೆ ವತಿಯಿಂದ 2023-24 ನೇ ಸಾಲಿನ ಶೇ.7.25%, ಎಸ್.ಎಫ್.ಸಿ ಯೋಜನೆಯಡಿ ದೇವರಾಜು ಅರಸು

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 4.13 ಲಕ್ಷ, 2024-25 ನೇ ಸಾಲಿನ ಶೇ.7.25%, ಎಸ್ ಎಫ್ ಸಿ ಯೋಜನೆಯಡಿ ಸಮಾಜ

ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವವಂತಹ ಪರಿಶಿಷ್ಟಜಾತಿ, ಪಂಗಡದ ವಸತಿ ನಿಲಯಗಳಿಗೆ ಅಂದಾಜು ಮೊತ್ತ, 9 ಲಕ್ಷ, 2024-

25 ಸಾಲಿನ ಶೇ.24.10% ಎಸ್ ಎಫ್ ಸಿ ಯೋಜನೆಯಡಿ ಅಂಬೇಡ್ಕರ್ ಭವನಕ್ಕೆ ಸಾಮಗ್ರಿಗಳನ್ನು ಅಂದಾಜು ಮೊತ್ತ 2 ಲಕ್ಷ, 2023-

24 ನೇ ಸಾಲಿನ ಶೇ.24.10% ನಗರಾಸಭಾ ನಿಧಿ ಯೋಜನೆ ಅಂದಾಜು ಮೊತ್ತ 3 ಲಕ್ಷ ಜಿಮ್ ಉಪಕರಣ, ಮಹಿಳಾ ಮತ್ತು ಮಕ್ಕಳ

ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಇಲಾಖೆಗೆ ಅಂದಾಜು 3 ಲಕ್ಷ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಸೇವಾ

ಕೇಂದ್ರಕ್ಕೆ ಅಂದಾಜು 5 ಲಕ್ಷ ರೂ ಉಪಕರಣಗಳನ್ನು ನೀಡಲಾಯಿತು.

ನಗರ ಸಭೆ ಅಧ್ಯಕ್ಷ ರವಿರಾಜ ಚಂದ್ರಹಾಸ ಅಂಕೋಲೆಕರ , ಕೈಗಾದ ಅಧಿಕಾರಿಗಳಾದ ಎಸ್. ಜಿ ತಿಪ್ಪೇಸ್ವಾಮಿ, ಗಣೇಶ್ ಜಿ

ಗಾವಂಕರ್, ಜಗದೀಶ್ ಗುನಗಾ, ನಗರಸಭೆ ಉಪಾಧ್ಯಕ್ಷೆ ಪ್ರೀತಿ ಮಧುಕರ ಜೋಶಿ, ನಗರಸಭೆ ಪೌರಯುಕ್ತ ಜಗದೀಶ್ ಹುಲಗಜ್ಜಿ,

ನಗರಸಭೆ ಸದಸ್ಯರು, ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕರು ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net