ಕೇಂದ್ರದ ನೀತಿ ವಿರೋಧಿಸಿ ನ. 5 ರಂದು ಹೆದ್ದಾರಿ ತಡೆದು ಬೀದಿಗಿಳಿಯಲಿರುವ ರೈತರು

3HSN1
Published on


ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ಕಾನೂನು ಜಾರಿಗೆ ತರುತ್ತಿದ್ದು ಇದನ್ನೆಲ್ಲ ವಿರೋಧಿಸಿ ನ. 5 ರಂದು ರಾಜ್ಯದಾದ್ಯಂತ ಒಂದು ಗಂಟೆ ಹೆದ್ದಾರಿ ತಡೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಮಂಗಳವಾರ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಏರ್ಪಡಿಸಿದ್ದ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಪಿಎಂಸಿ ಕಾಯ್ದೆ, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ, ಕರ್ನಾಟಕ ಭೂ ಸುಧಾರಣಾ ಕಾಯ್ದೆ ಕೃಷಿ ವಲಯಕ್ಕೆ ನೇರವಾಗಿ ಸಂಬಂಧಪಡುತ್ತಿದ್ದು, ಗಂಡಾಂತರ ಎದುರಾಗಿದೆ ಎಂದರು.

ರೈತ ವಿರೋಧಿ ಕಾಯ್ದೆಗಳು ಲೋಕಸಭೆ, ವಿಧಾನಸಭೆಯಲ್ಲಿ ಅನುಮೋದನೆಗೊಂಡು ರಾಷ್ಟ್ರಪತಿ ಅಂಗೀಕಾರಕ್ಕೆ ಹೋಗಿವೆ. ರಾಷ್ಟ್ರಪತಿ ಅಂಗೀಕಾರ ಸಿಕ್ಕು ಇನ್ನೇನು ಜಾರಿಯಾಗಲಿವೆ. ವಿಧಾನ ಪರಿಷತ್‌ನಲ್ಲಿ ಈ ಕಾಯ್ದೆಗಳಿಗೆ ಹಿನ್ನೆಡೆಯಾಗಿದೆ. ಸದ್ಯ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, ಅಲ್ಲಿಯೂ ಅವರೇ ಬಹುಮತ ಪಡೆದು ಕಾಯ್ದೆಗಳನ್ನು ಅಂಗಿಕರಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net