13 ರಂದು ಹಂಪಿ ಉತ್ಸವ: ನಾಲ್ಕೇ ತಾಸಿನಲ್ಲಿ ಮುಕ್ತಾಯ; ಮೆರವಣಿಗೆ, ತುಂಗಾರತಿಗೆ ಸೀಮಿತ

Hampi Utsav Logo
Published on

ಬಳ್ಳಾರಿ: ಹಂಪಿ ಉತ್ಸವ ನ.13ಕ್ಕೆ ನಿಗದಿಯಾಗಿದೆ. ಉದ್ದಾನ ವೀರಭದ್ರ ದೇವಸ್ಥಾನದಿಂದ ಜಾನಪದ ಕಲಾ ತಂಡಗಳ ಮೆರವಣಿಗೆ ಹಾಗೂ ತುಂಗಾರತಿಗೆ ಮಾತ್ರ ಉತ್ಸವ ಸೀಮಿತಗೊಳಿಸಲಾಗಿದೆ. ಈ ಕುರಿತು ಅಧಿಕೃತ ೋಷಣೆ ಬಾಕಿ ಇದೆ.

ಕರೊನಾ ಹಿನ್ನೆಲೆಯಲ್ಲಿ ಹಂಪಿ ಉತ್ಸವವನ್ನು ಒಂದು ದಿನಕ್ಕೆ ಸೀಮಿತಗೊಳಿಸುವುದಾಗಿ ಸಚಿವ ಆನಂದ ಸಿಂಗ್ ತಿಳಿಸಿದ್ದರು. ಕೇವಲ ನಾಲ್ಕು ಗಂಟೆಗಳಲ್ಲಿ ಉತ್ಸವ ಆರಂಭ ಹಾಗೂ ಸವಾರೋಪಗೊಳ್ಳುವಂತೆ ಕಾರ್ಯಕ್ರಮ ನಿಗದಿಗೊಳಿಸಲಾಗುತ್ತಿದೆ. ಸಂಜೆ 4ಕ್ಕೆ ಜಾನಪದ ಕಲಾತಂಡಗಳ ಮೆರವಣಿಗೆ ಆರಂಭವಾಗಲಿದ್ದು, ರಾತ್ರಿ 8 ಗಂಟೆಯೊಳಗೆ ತುಂಗಾರತಿ ಮೂಲಕ ಉತ್ಸವ ಸಮಾರೋಪಗೊಳ್ಳಲಿದೆ.

ಮೆರವಣಿಗೆಯಲ್ಲಿ ಜಿಲ್ಲೆಯ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಆಹ್ವಾನಿತರ ಪಟ್ಟಿ ಇನ್ನೂ ಸಿದ್ಧವಾಗಿಲ್ಲ. ಕಾರ್ಯಕ್ರಮ ಅಂತಿಮಗೊಳಿಸುವ ಬಗ್ಗೆ ಚರ್ಚೆ ನಡೆದಿದ್ದು, ಶ್ರೀ ಸ್ಪಷ್ಟ ವಾಹಿತಿ ದೊರೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net