ಕುಖ್ಯಾತ ಆರೋಪಿ ಕಾರಾಟ್ ನೌಶಾದ್ ಬಂಧನ

arrested
Published on

ಕಾಸರಗೋಡು: ಕೇರಳ ಹಾಗೂ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾಗಿರುವ ಆರೋಪಿ ಕಾರಾಟ್ ನೌಶದ್‌ನನ್ನು ಕಾಞಂಗಾಡು ಪೊಲೀಸರ ತಂಡ ಬಂಧಿಸಿದೆ. ಮಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಈತ ಕಳವು ಕೃತ್ಯಕ್ಕಾಗಿ ಕಾಞಂಗಾಡಿಗೆ ಆಗಮಿಸಿರುವ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.ರೈಲಿನಲ್ಲಿ ಕಾಞಂಗಾಡಿಗೆ ಬಂದಿಳಿದ ಈತನನ್ನು ಸೆರೆಹಿಡಿಯಲು ಪೊಲೀಸರು ತೆರಳುತ್ತಿದ್ದಂತೆ ಅಲ್ಲಿಂದ ಪರಾರಿಯಾಗಲೆತ್ನಿಸಿದ್ದಾನೆ. ತಕ್ಷಣ ಪೊಲೀಸರು ಹಿಂಬಾಲಿಸಿ ಸೆರೆ ಹಿಡಿಯುತ್ತಿದ್ದಂತೆ ಕೈಯಲ್ಲಿದ್ದ ಬ್ಲೇಡಿನಿಂದ ತನ್ನ ತುಟಿಗೆ ಗೀರಿಕೊಂಡು ಗಾಯಮಾಡಿಕೊಂಡಿದ್ದಾನೆ.ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net