ಕೊಡವರಿಗೆ ಸ್ವಾಯತ್ತತೆ ಕಲ್ಪಿಸಲು ಆಯೋಗ ರಚನೆಗೆ ಸೂಚನೆ

Z CNC
Published on

ಮಡಿಕೇರಿ: ಕೊಡವ ನ್ಯಾಷನಲ್ ಕೌನ್ಸಿಲ್‌ನ ಬೇಡಿಕೆಯಾಗಿರುವ ಕೊಡವರಿಗೆ ಭೂ ರಾಜಕೀಯ ಸ್ವಾಯತ್ತತೆ ನೀಡಬೇಕು ಹಾಗೂ ಜನಾಂಗಕ್ಕೆ ದೊರಕಬೇಕಾದ ಬುಡಕಟ್ಟು ಸ್ಥಾನಮಾನದ ಬೇಡಿಕೆಯನ್ನು ಪೂರೈಸಲು ಆಯೋಗ ರಚಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟೀಸ್ ನೀಡಿದೆ.


ಜನಾಂಗದ ಬೇಡಿಕೆಗಳ ಪೂರೈಕೆಗೆ ಆಯೋಗ ರಚಿಸುವಂತೆ ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಸುಬ್ರಮಣ್ಯನ್ ಸ್ವಾಮಿರವರು ಏ.೬ ರಂದು ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಲ್ಲಿಸಿದ್ದರು. ಈ ಸಂಬಂಧ ಏ.೧೭ ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಸನ್ನ ಬಿ ವರಾಲೆ ಅವರನ್ನು ಒಳಗೊಂಡ ಪೀಠ, ಅರ್ಜಿಯಲ್ಲಿನ ಮನವಿಯಂತೆ ಸಿ.ಎನ್.ಸಿ ಬೇಡಿಕೆಗಳ ಈಡೇರಿಕೆಗೆ ಆಯೋಗ ರಚಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟೀಸ್ ಜಾರಿ ಮಾಡಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.


ಡಾ.ಸುಬ್ರಮಣ್ಯನ್ ಸ್ವಾಮಿರವರು ಏ.೬ ರಂದು ವಕೀಲ ಸತ್ಯ ಸಬರ್‌ವಾಲ ಅವರ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net