ಪೌರಕಾರ್ಮಿಕರ ಮುಷ್ಕರ ನಿಷೇಧಿಸಿ ಅಧಿಸೂಚನೆ

gba board
Published on

ಬೆಂಗಳೂರು: ರಾಜ್ಯದ ಎಲ್ಲ ಪೌರಸಂಸ್ಥೆಗಳಿಗೆ ಅನ್ವಯಿಸಿ ಘನತ್ಯಾಜ್ಯ ನಿರ್ವಹಣೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿ ಸರ್ಕಾರ ಆದೇಶ ಹೊರಡಿಸಿದೆ.

ಘನತ್ಯಾಜ್ಯ ನಿರ್ವಹಣೆ ನಿಯಮಾವಳಿ - 2016ರ ಪ್ರಕಾರ ಪೌರ ಸಂಸ್ಥೆಗಲು ತಮ್ಮ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ, ಶೇಖರಣೆ, ವಿಂಗಡಣೆ, ಸಾಗಣೆ, ಸಂಸ್ಕರಣೆ ಹಾಗೂ ವಿಲೇವಾರಿ ಕಾರ್ಯವನ್ನು ತಪ್ಪದೇ ನಿರ್ವಹಿಸಬೇಕಿದೆ. ಇದು ಹೊಸದಾಗಿ ರಚನೆಯಾಗಿರುವ ಬೆಂಗಳೂರಿನ ಐದೂ ಪಾಲಿಕೆಗಳಿಗೆ ಅನ್ವಯಿಸಲಾಗಿದೆ. ಹಾಗಾಗಿ ಜಿಬಿಎ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸರಬರಾಜುದಾರರು/ಗುತ್ತಿಗೆದಾರರುಗಳ ಅಧೀನದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಪೌರಕಾರ್ಮಿಕರು, ಆಟೋ ಸಹಾಯಕರು, ಕಾಂಪ್ಯಾಕ್ಟರ್ ಲೋಡರ್‌ಗಳು, ಚಾಲಕರು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಂದಿನ ಒಂದು ವರ್ಷ ಮುಷ್ಕರ ನಡೆಸುವುದನ್ನು ನಿಷೇಧಿಸಿ ಆದೇಶಿಸಲಾಗಿದೆ.

ಮುಂದಿನ ವಾರ ಘನತ್ಯಾಜ್ಯ ವಿಲೇವಾರಿಯಲ್ಲಿ ತೊಡಗಿಸಿಕೊಂಡಿರುವ ಗುತ್ತಿಗೆ ಸಿಬ್ಬಂದಿ ಮುಷ್ಕರ ಹೂಡುವ ಹಿನ್ನೆಲೆಯಲ್ಲಿ ಸರ್ಕಾರ ಈ ಅಧಿಸೂಚನೆ ಹೊರಡಿಸಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net