ಭಾರಿ ವಾಹನ ಸಂಚಾರ ಸ್ಥಗಿತಕ್ಕೆ ಸೂಚನೆ

20 ylp 04 (tahashildar)
Published on

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಬೀಗಾರ-ಬಾಗಿನಕಟ್ಟಾ ರಸ್ತೆಯ ಪಕ್ಕ ಭೂ ಕುಸಿತ ಆದ ಸ್ಥಳಕ್ಕೆ ತಹಸೀಲ್ದಾರ ಚಂದ್ರಶೇಖರ ಹೊಸಮನಿ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಬೀಗಾರ-ಬಾಗಿನಕಟ್ಟಾ ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರ ನಿಷೇಧಿಸಬೇಕು. ವಾಹನಗಳ ಸಂಚಾರ ನಿಷೇಧದ ಕುರಿತು ಮಾಹಿತಿಗಾಗಿ ಬ್ಯಾನರ್ ಅಳವಡಿಸಬೇಕು. ಹೆಚ್ಚಿನ ಮಳೆ ಇದ್ದಾಗ ಎಲ್ಲಾ ವಾಹನಗಳೂ ಬಾಗಿನಕಟ್ಟಾ-ಚಿಮನಳ್ಳಿ-ತೇಲಂಗಾತ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಲು ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಹಸೀಲ್ದಾರ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net