ಬಿಎಸ್​ಎನ್​ಎಲ್​ ಟವರ್​ ನಿರ್ಮಾಣಕ್ಕೆ ಜಾಗ ಒದಗಿಸಲು ಸೂಚನೆ

udp-16-bsnl kota
Published on

ಉಡುಪಿ: ಜಿಲ್ಲೆಯಲ್ಲಿ 156 ಬಿಎಸ್​ ಎನ್​ ಎಲ್​ ಟವರ್​ ಗಳಿದ್ದು ನೆಟ್ವರ್ಕ್​ ಪ್ರಮಾಣ ವಿಪರೀತ ಕಡಿಮೆಯಾದ ಕಾರಣ ಲಕ್ಷಾಂತರ ಗ್ರಾಹಕರು ಬಿಎಸ್​ ಎನ್​ ಎಲ್​ ನಿಂದ ಖಾಸಗಿ ಸಂಸ್ಥೆಯ ಸಿಮ್​ ಗೆ ವರ್ಗಾವಣೆಗೊಳ್ಳುತ್ತಿದ್ದಾರೆ. ಹೀಗಾಗಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ 41 ಟವರ್​ ಪೈಕಿ ನಾಲ್ಕು ಟವರ್​ಗಳಿಗೆ ನಿವೇಶನ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ತಹಶೀಲ್ದಾರ್​ಗಳು ಗಮನಹರಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿನಲ್ಲಿ ಸೋಮವಾರ ದೂರಸಂಪರ್ಕ ನಿಗಮ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು. ಮುಂದಿನ ನಾಲ್ಕು ದಿವಸದಲ್ಲಿ ಒದಗಿಸುವುದಾಗಿ ಕುಂದಾಪುರದ ತಹಶಿಲ್ದಾರ್​ ಶೋಭಾ ಹಾಗೂ ಬೈಂದೂರು ತಹಶೀಲ್ದಾರ್​ ಪ್ರತಿಭಾ ಭರವಸೆ ನೀಡಿದರು. ಅಧಿಕಾರಿಗಳು ಎಚ್ಚೆತ್ತುಕೊಂಡು ನೆಟ್ವರ್ಕ್​ ಪ್ರಮಾಣವನ್ನು ಹೆಚ್ಚು ಗೊಳಿಸುವುದು ಮತ್ತು ಯಾವ ಟವರ್​ ನಲ್ಲಿ ವಿದ್ಯುತ್​ ಇಲ್ಲದಿದ್ದಾಗ ಮೊಬೈಲ್​ ಸಂಪರ್ಕ ಕಡಿತವಾಗುತ್ತದೆ ಅಲ್ಲಿ ಬ್ಯಾಟರಿ ಅಳವಡಿಕೆ ಮಾಡುವುದು. ಯಾವ ಗ್ರಾಮದಲ್ಲಿ ಬಿಎಸ್​ ಎನ್​ ಎಲ್​ ಗೆ ಸಿಬ್ಬಂದಿ ಕೊರತೆ ಇರುವಲ್ಲಿ ಸ್ಥಳಿಯಾಡಳಿತ ಸಂಸ್ಥೆ, ಗ್ರಾಮ ಪಂಚಾಯಿತಿಗೆ ನಿರ್ವಹಣೆಗೆ ಬಗ್ಗೆ ಜವಾಬ್ದಾರಿ ನೀಡುವ ಬಗ್ಗೆ ಪರಿಶೀಲಿಸಬಹುದು ಎಂದು ಸಲಹೆ ನೀಡಿದರು. ಕಡಿಯಾಳಿಯಲ್ಲಿ ಬಿಎಸ್​ ಎನ್​ ಎಲ್​ ನ ಬಹುಮಹಡಿ ಕಟ್ಟಡ ಉಪಯೋಗವಿಲ್ಲದೆ ಉಳಿದಿದ್ದು ಅದನ್ನು ಕೌಶಲ್ಯ ಅಭಿವೃದ್ಧಿ ಸೇರಿದಂತೆ ಇತರ ಸರ್ಕಾರಿ ಸೌಲಭ್ಯಗಳ ಬಳಕೆಗೆ ನೀಡಬಹುದು. ಈ ಬಗ್ಗೆ ಸದ್ಯದಲ್ಲೇ ಬೆಂಗಳೂರಿನ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಸಂಸದರು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಬಿಎಸ್​ಎನ್​ಎಲ್​ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net