

ಕಂಪ್ಲಿ: ಪಟ್ಟಣದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಬಳಿಯ ಆವರಣದಲ್ಲಿನ ಪಟಾಕಿ ಅಂಗಡಿಗಳಿಗೆ ಹೊಸಪೇಟೆಯ ವಾಣಿಜ್ಯ ತೆರಿಗೆಗಳ ಇಲಾಖೆ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ:ತಾತ್ಕಾಲಿಕ ಪಟಾಕಿ ಅಂಗಡಿಗಳಿಗೆ ಎನ್ಒಸಿ ಕಡ್ಡಾಯ
ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಗರ್ಜಿ ಲಿಂಗಪ್ಪ ಮಾತನಾಡಿ, ಪಟಾಕಿ ಅಂಗಡಿಗಳಲ್ಲಿ ಕಡ್ಡಾಯವಾಗಿ ಸುರಕ್ಷತಾ ಕ್ರಮ ಅನುಸರಿಸಬೇಕು. ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು. ಸಾಂದರ್ಭಿಕ ತೆರಿಗೆದಾಯಕ ವ್ಯಕ್ತಿಯಾಗಿ ನೋಂದಣಿ ಪಡೆದು ಪಟಾಕಿ ವ್ಯಾಪಾರ ಮಾಡಬೇಕು. ನಂತರ ತೆರಿಗೆ ಪಾವತಿ ದಾಖಲೆಗಳನ್ನು ಸಕಾಲದಲ್ಲಿ ಸಲ್ಲಿಸಬೇಕು. ಜಿಎಸ್‌ಟಿ ನೋಂದಣಿ ಮಾಡಿಸಿದ ಮೂರಕ್ಕೂ ಹೆಚ್ಚು ಪಟಾಕಿ ಮಾರಾಟಗಾರರಿಗೆ ನೋಟಿಸ್ ನೀಡಲಾಗಿದೆ ಎಂದರು. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಮರಿಗಾದೆಪ್ಪ, ವಾಣಿಜ್ಯ ತೆರಿಗೆ ಪರಿವೀಕ್ಷಕಿ ದಾನಾವತಿ ಇತರರಿದ್ದರು.