ಕೋಟೆಕೆರೆ ಸುತ್ತಲು ಸ್ವಚ್ಚತೆ ಕಾಪಾಡಲು ಸೂಚನೆ

12 ckm 3
ಚಿಕ್ಕಮಗಳೂರಿನ ಕೋಟೆ ಕೆರೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಸುಮಂತ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಸ್ಚಚ್ಛ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಶುಭ ವಿಜಯಕುಮಾರ್, ಕಾರ್ಯದರ್ಶಿ ಗೀತಾ ವೆಂಕಟೇಶ್, ಟ್ರಸ್ಟಿ ಲಕ್ಷಿö್ಮÃ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಕೋಟೆಕೆರೆ ಭಾಗದ ಸುತ್ತಲು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಕಿಂಗ್ ಪಾಥ್ ಹಾಗೂ ವಿದ್ಯುತ್ ದ್ವೀಪ ಅಳವಡಿಸಿ ಸ್ವಚ್ಚತೆಗೆ ಆದ್ಯತೆ ನೀಡಬೇಕು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರೀಯ ಅವರು ತಹಸೀಲ್ದಾರ್ ಹಾಗೂ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು.

ಸ್ವಚ್ಚ ಚಾರಿಟಬಲ್ ಟ್ರಸ್ಟ್ ಕರೆಯ ಮೇರೆಗೆ ಶುಕ್ರವಾರ ಕೋಟೆಕೆರೆಗೆ ಆಗಮಿಸಿ ಪರಿಶೀಲನೆ ನಡೆಸಿ ಮಾತನಾಡಿದ ಅವರು ಕೆರೆಯ ಆವರಣದಲ್ಲಿ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕೆರೆ ಸುತ್ತಮುತ್ತಲು ಹೆಚ್ಚಿರುವÀ ಗಿಡ-ಗಂಟಿ ಗಳನ್ನು ತೆರವುಗೊಳಿಸಬೇಕು. ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಪಾದಚಾರಿಗಳಿಗೆ ಅನುಕೂಲವಾಗುವಂತೆ ವಾಕಿಂಗ್‌ಪಾಥ್ ನಿರ್ಮಿಸಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚಿಸಿದರು.
ನಗರದ ಹೃದಯಭಾಗದಲ್ಲಿರುವ ಕೆರೆ ಅಭಿವೃದ್ಧಿಗೆ ಜಿಲ್ಲಾಡಳಿತ ಶ್ರಮಿಸಲಿದೆ. ಅಲ್ಲದೇ ಕೆರೆ ಭಾಗದ ಸುತ್ತ ಮುತ್ತಲು ಸರ್ವೇ ನಡೆಸಿ ಒತ್ತುವರಿ ಕಂಡುಬAದಲ್ಲಿ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗುತ್ತೇವೆ.ಕೊಳಚೆ ನೀರು ಕೆರೆಗೆ ಹರಿಯದಂತೆ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿz್ದೆÃನೆ ಎಂದು ತಿಳಿಸಿದರು.
ಕೆರೆಯ ಸುತ್ತಲು ಕೆಲವು ಸಾರ್ವಜನಿಕರು ಕಸ ಎಲ್ಲೆಂದರಲ್ಲಿ ಬೀಸಾಡುತ್ತಿರುವ ಹಿನ್ನೆಲೆಯಲ್ಲಿ ಪೌರಾಯುಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದು, ಮುಂಬರುವ ದಿನಗಳಲ್ಲಿ ಕೆರೆ ಭಾಗದಲ್ಲಿ ಸಿಸಿಟಿವಿ ಅಳವಡಿಸುವ ಜೊತೆಗೆ ಕಾವಲುಗಾರನನ್ನು ನೇಮಿಸಿ ಉತ್ತಮ ವಾತಾವರಣ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಸ್ವಚ್ಚ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಶುಭ ವಿಜಯ್ ಮಾತನಾಡಿ, ಕೆರೆ ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಎರಡು ಬದಿಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯ ಟ್ರಸ್ಟ್ನಿಂದ ಮಾಡಲಾಗುತ್ತಿದೆ. ಸಸಿಗಳ ನಿರ್ವಹಣೆಯನ್ನು ತಾವು ನಿರ್ವಹಿಸುತ್ತಿದ್ದು ಜೊತೆಗೆ ನಗರಸಭೆ ಕೈಜೋಡಿಸಿದರೆ ಸಮೃದ್ಧ ವಾತಾವರಣ ಲಭ್ಯವಾಗಲಿದೆ ಎಂದರು.
ರಾತ್ರಿ ಸಮಯದಲ್ಲಿ ಕಾರು ಅಥವಾ ಬೈಕ್‌ಗಳಲ್ಲಿ ಕೆರೆಯ ಒಳಾಂಗಣಕ್ಕೆ ತೆರಳುವ ಕೆಲವು ಕುಡುಕರು ಮದ್ಯರಾತ್ರಿತನಕ ಮದ್ಯಸೇವಿಸಿ ಎಲ್ಲೆಂದರಲ್ಲೇ ಬಾಟಲಿ ಬೀಸಾಡುವುದು, ಒಡೆದು ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಮಂತ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಸ್ವಚ್ಚ ಚಾರಿಟಬಲ್ ಟ್ರಸ್ಟ್ ಕಾಯದರ್ಶಿ ಗೀತಾ ವೆಂಕಟೇಶ್, ಟ್ರಸ್ಟಿ ಎಚ್.ಪಿ.ಲಕ್ಷಿö್ಮÃ ಸೇರಿದಂತೆ ಮತ್ತಿತರರ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net