ಹೊಟೇಲ್, ಬೇಕರಿ ಮಾಲೀಕರಿಗೆ ನೋಟೀಸ್

Notice to hotel bakery owners
ಬಾಗಲಕೋಟೆ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಜಿಲ್ಲಾ ಪರಿಶೀಲನೆ ತಂಡ ಬಾಗಲಕೋಟೆ ನಗರದ ವಿವಿಧೆಡೆ ದಾಳಿ ನಡೆಸಿತು. ತಹಸೀಲ್ದಾರ ಅಮರೇಶ ಪಮ್ಮಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ. ವಿಜಯ ಕಂಠಿ, ಶಿರಸ್ತೇದಾರ ಶ್ರೀಶೈಲ ಗಯ್ಯಳಿ, ಆಹಾರ ನಿರೀಕ್ಷಕ ಎ.ಡಿ. ಸಾರವಾಡ, ನಗರಸಭೆ ಅಧಿಕಾರಿ ಸತೀಶ ಚವಡಿ ಇದ್ದರು.
Published on

ಬಾಗಲಕೋಟೆ: ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಜಿಲ್ಲಾ ಪರಿಶೀಲನೆ ತಂಡ ಬಾಗಲಕೋಟೆ ನಗರದ ವಿವಿಧ ಹೊಟೇಲ್‌ಗಳ ಮೇಲೆ ದಾಳಿ ನಡೆಸಿ, ಆಹಾರ ಪದಾರ್ಥ ತಯಾರಿಸುವವರು ಸುರಕ್ಷತಾ ರಕ್ಷಾ ಕವಚಗಳನ್ನು ಧರಿಸರ ಹೊಟೇಲ್ ಮತ್ತು ಬೇಕರಿ ಅಂಗಡಿ ಮಾಲಿಕರಿಗೆ ನೋಟಿಸ್ ನೀಡಲಾಯಿತು.

ತಹಸೀಲ್ದಾರ ಮುಂದಾಳತ್ವದಲ್ಲಿ ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ನಗರಸಭೆಯೊಂದಿಗೆ ಜಂಟಿಯಾಗಿ ನಗರದ ಬೀದಿ ಬದಿ ಅಂಗಡಿಗಳು ಮತ್ತು ಹೊಟೇಲ್‌ಗಳ ಮೇಲೆ ದಾಳಿ ನಡೆಸಲಾಯಿತು. ಟೆಸ್ಟಿಂಗ್ ಪೌಡರ್ ಬಳಸದಂತೆ, ಆಹಾರ ಪರವಾನಗಿ ಪಡೆದಿರುವ ಬಗ್ಗೆ ಪರಿಶೀಲಿಸಲಾಯಿತು.

ಕೆಲಸಗಾರರ ವೈದ್ಯಕೀಯ ಪ್ರಮಾಣ ಪತ್ರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ದಾಳಿ ತಂಡ ಪರಿಶೀಲಿಸಿತು. ಸ್ವಚ್ಛತೆಗೆ ಗಮನ ಹರಿಸದೆ ಇರುವ ತಟ್ಟೆ ಮತ್ತು ಚಮಚೆಗಳನ್ನು ತೊಳೆದು ಬಿಸಿ ನೀರಿನಿಂದ ಸ್ವಚ್ಛಗೊಳಿಸಲು ಸೂಚಿಸಿದರು. ಆಹಾರ ತಯಾರಿಕಾ ಕ್ರಮ, ಸುರಕ್ಷಾ ಕವಚಗಳನ್ನು ಧರಿಸದೇ ಇರುವಂತಹ ಹೋಟೆಲ್ ವ್ಯಾಪಾರಸ್ಥರಿಗೆ ಮತ್ತು ಬೇಕರಿ ಅಂಗಡಿ ಮಾಲಿಕರಿಗೆ ನೋಟಿಸ್ ನೀಡಲಾಯಿತು.

ಕಾರ್ಯಾಚರಣೆಯಲ್ಲಿ ತಹಸೀಲ್ದಾರ ಅಮರೇಶ ಪಮ್ಮಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ ಡಾ. ವಿಜಯ ಕಂಠಿ, ಶಿರಸ್ತೇದಾರ ಶ್ರೀಶೈಲ ಗಯ್ಯಳಿ, ಆಹಾರ ನಿರೀಕ್ಷಕ ಎ.ಡಿ. ಸಾರವಾಡ, ನಗರಸಭೆ ಅಧಿಕಾರಿ ಸತೀಶ ಚವಡಿ, ಜಿಲ್ಲಾ ಬಾಲ ಕಾರ್ಮಿಕ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ಆರೋಗ್ಯ ಇಲಾಖೆಯ ನೀಲಕಂಠ ನೀಲನಾಯಕ, ತಾಲೂಕಾ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ ಸಾಳಗುಂದಿ ಹಾಗೂ ಶರಣು ರೇವಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net