

ಲಕ್ಷ್ಮೇಶ್ವರ: ಲೋಕಾಯುಕ್ತ ಅಧಿಕಾರಿಗಳು ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಬುಧವಾರ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಸರ್ವೇ, ಕಂದಾಯ, ಗ್ರಾಮ ಪಂಚಾಯಿತಿ, ಪುರಸಭೆ, ಹೆಸ್ಕಾಂ, ಕಾರ್ಯನಿರ್ವಾಹಕ ಇಂಜಿನಿಯರ್, ಕೇಂದ್ರ ಲೋಕಾಯುಕ್ತ ಸಹಿತ ಒಟ್ಟು 21 ಅರ್ಜಿಗಳು ಸಲ್ಲಿಕೆಯಾಗಿವೆ. ಪ್ರಾಮುಖ್ಯತೆಗೆ ತಕ್ಕಂತೆ ಕಾಲಮಿತಿಯೊಳಗೆ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಶಂಕರ ರಾಗಿ ಸೂಚಿಸಿದರು.
ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಪುರುಷೋತ್ತಮ, ತಹಸೀಲ್ದಾರ್ ಕೆ.ಆನಂದ ಶೀಲ, ಲೋಕಾಯುಕ್ತ ಹೆಡ್ ಕಾನ್‌ಸ್ಟೆಬಲ್ ಪಿ.ಎಚ್.ಗುಬ್ಬಿ, ಎಚ್.ಬಿ. ಲಕ್ಕನಗೌಡರ, ವಿ.ಬಿ. ಅರಿಶಿಣದ, ಮುತ್ತುರೆಡ್ಡಿ ಬಾರೆಡ್ಡಿ, ಪ್ರಸಾದ ಎಲ್.ಪಿ, ಪುರಸಭೆ ವ್ಯವಸ್ಥಾಪಕಿ ಮಂಜುಳಾ ಹೂಗಾರ, ತೋಟಗಾರಿಕೆ ಅಧಿಕಾರಿ ಸುರೇಶ ಕುಂಬಾರ, ಹೆಸ್ಕಾಂನ ಗುರುರಾಜ.ಸಿ, ತಾಪಂ ಇಒ ಕೃಷ್ಣಪ್ಪ ಧರ್ಮರ್, ಉಪ ನೋಂದಣಾಧಿಕಾರಿ ಎಸ್.ಕೆ ಜಲರೆಡ್ಡಿ ಇತರರಿದ್ದರು.