ಗ್ರಾಹಕರ ದೂರು ಪ್ರಕರಣ: 30ರೊಳಗೆ ದಾಖಲೆಗೆ ಅರ್ಜಿ ಸಲ್ಲಿಸಿ

application
Published on

ಮಂಡ್ಯ: ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದಾಖಲಾಗಿರುವ ಗ್ರಾಹಕರ ದೂರಿಗೆ ಸಂಬಂಧಪಟ್ಟಂತೆ 2014ರ ಸೆಪ್ಟೆಂಬರ್‌ನಿಂದ 2019ರ ಆಗಸ್ಟ್‌ವರೆಗಿನ ಅವಧಿಯಲ್ಲಿ ಇತ್ಯರ್ಥಗೊಂಡ ದೂರು ಹಾಗೂ ಅಮಲ್ಜಾರಿ ಪ್ರಕರಣದಲ್ಲಿ ಯಾವುದೇ ಮೇಲ್ಮನವಿ, ರಿಟ್, ಪುನರ್ ಪರಿಶೀಲನಾ ಅರ್ಜಿ ಹಾಗೂ ತಡೆಯಾಜ್ಞೆ ಬಾಕಿ ಇಲ್ಲದೇ ಇರುವಂತಹ 5 ವರ್ಷ ಅವಧಿ ಮೀರಿರುವ ಕಡತವನ್ನು ರಾಜ್ಯ ಗ್ರಾಹಕರ ಆಯೋಗದ ನಿರ್ದೇಶನದನ್ವಯ ನಾಶಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರಕರಣದ ಪಕ್ಷಗಾರರು ಅಥವಾ ವಕೀಲರು ಮೂಲ ದಾಖಲೆ ಮತ್ತು ಇನ್ನಿತರೆ ಆದೇಶದ ದಾಖಲೆಗಳನ್ನು ಸೆ.30 ರೊಳಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿಗೆ ಅರ್ಜಿ ಸಲ್ಲಿಸಬಹುದು. ನಿಗದಿಪಡಿಸಿರುವ ಅವಧಿಯ ನಂತರ ಕಡತಗಳನ್ನು ನಿಯಮಾನುಸಾರ ನಾಶಪಡಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net