ನರೇಗಾ ಕಾಮಗಾರಿಗೆ ಅರ್ಜಿ ಸಲ್ಲಿಸಲು ಸೂಚನೆ

Published on

ಬೆಳ್ತಂಗಡಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2025-26ನೇ ಸಾಲಿನ ಕ್ರಿಯಾ ಯೋಜನೆ ತಯಾರಿಗೆ ವೈಯಕ್ತಿಕ ಮತ್ತು ಸಾರ್ವಜನಿಕ ಕಾಮಗಾರಿ ಕೈಗೊಳ್ಳುವವರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬಹುದು.

ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದಡಿ ವೈಯಕ್ತಿಕ ಕಾಮಗಾರಿಗಳಾದ ತೆರೆದ ಬಾವಿ, ದನದ ಹಟ್ಟಿ, ಮೇಕೆ/ಕುರಿ ಶೆಡ್, ಹಂದಿ ಶೆಡ್, ಕೋಳಿ ಶೆಡ್, ಕೊಳವೆಬಾವಿ ಮರುಪೂರಣ ಘಟಕ, ದ್ರವ ತ್ಯಾಜ್ಯ ಗುಂಡಿ, ಎರೆಹುಳು ಗೊಬ್ಬರ ಘಟಕ, ಬಯೋಗ್ಯಾಸ್, ಕೃಷಿ ಹೊಂಡ ರಚನೆ, ಗೊಬ್ಬರ ಗುಂಡಿ, ಇಂಗುಗುಂಡಿ, ಅಡಕೆ ಕೃಷಿ, ತೆಂಗು ಕೃಷಿ, ಚಿಕ್ಕು, ಕಾಳುಮೆಣಸು, ಕೊಕ್ಕೋ, ವೀಳ್ಯದೆಲೆ, ಮಾವು, ಗುಲಾಬಿ, ತಾಳೆ, ಗೇರು, ಮಲ್ಲಿಗೆ ಅಂಗಾಂಶ ಬಾಳೆ, ಪಪ್ಪಾಯ, ನುಗ್ಗೆ ಕೃಷಿ, ರಂಬೂಟನ್, ಪೇರಳೆ, ಪೌಷ್ಟಿಕ ತೋಟ ರಚನೆ, ಬಸಿಗಾಲುವೆ(ಉಜಿರ್ ಕಣಿ) ರಚನೆ, ಡ್ರ್ಯಾಗನ್ ಫ್ರೂಟ್, ಸಾರ್ವಜನಿಕ ಕಾಮಗಾರಿಗಳಾದ ತೋಡಿನ ಹೂಳೆತ್ತುವಿಕೆ, ಇಂಗುಗುಂಡಿ ನಿರ್ಮಾಣ ಇತ್ಯಾದಿ ಕಾಮಗಾರಿಗಳಿಗೆ ಅರ್ಜಿ ಸಲ್ಲಿಸಬಹುದು.

ಬಿಪಿಎಲ್ ಕಾರ್ಡ್ ಪ್ರತಿ, ಎಪಿಎಲ್ ಆಗಿದ್ದಲ್ಲಿ ಸಣ್ಣ ರೈತ ಪ್ರಮಾಣಪತ್ರ, ಪ.ಜಾತಿ/ಪಂಗಡದ ಜಾತಿ ಪ್ರಮಾಣಪತ್ರ, ಆರ್‌ಟಿಸಿ ಪ್ರತಿ, ಹಕ್ಕುಪತ್ರ ಇದ್ದಲ್ಲಿ ಅದರ ಯಥಾಪ್ರತಿ ಮೊದಲಾದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬಹುದು ಎಂದು ತಾ.ಪಂ.ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net