ಜಿಲ್ಲೆಯಲ್ಲಿ ೩೭ ಆಹಾರ ಉದ್ದಿಮೆದಾರರಿಗೆ ನೋಟೀಸ್

notice
Published on

ಮಡಿಕೇರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಮತ್ತು ಆಯುಕ್ತರು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಬೆಂಗಳೂರು ಅವರ ಸೂಚನೆ ಮೇರೆಗೆ ಎರಡು ದಿನಗಳ ಕಾಲ ಅಂಕಿತಾಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕೊಡಗು ಜಿಲ್ಲೆ ಇವರಿಂದ ವಿಶೇಷ ಆಂದೋಲನ ನಡೆಸಿ ಕಾಯ್ದೆ ಉಲಂಘನೆ ಸಂಬಂಧಿಸಿದಂತೆ ಸುಮಾರು ೧೦ ಸಾವಿರ ದಂಡ ಮತ್ತು ೩೭ ಆಹಾರ ಉದ್ದಿಮೆದಾರರಿಗೆ ನೋಟೀಸ್ ನೀಡಲಾಯಿತು.


ಈ ಆಂದೋಲನದಲ್ಲಿ ಜಿಲ್ಲೆಯಾದ್ಯಾಂತ ಹೋಟೆಲ್, ರೆಸ್ಟೋರೆಂಟ್, ಬೇಕರಿ, ಬೀದಿಬದಿಯ ವ್ಯಾಪಾರಿಗಳು ಕ್ಯಾಂಟೀನ್ ಮತ್ತಿತರ ಸುಮಾರು ೫೪ ಘಟಕಗಳಿಗೆ ಭೇಟಿ ನೀಡಿ ಕಾಯ್ದೆಯಡಿ ಪರಿಶೀಲನೆ ನಡೆಸಿ ಆಹಾರ ಮಾದರಿಗಳನ್ನು ಸಂಗ್ರಹಿಸಲಾಯಿತು. ಕಾಯ್ದೆ ಉಲಂಘನೆ ಸಂಬಂಧಿಸಿದಂತೆ ಸುಮಾರು ೧೦ ಸಾವಿರ ದಂಡವನ್ನು ಮತ್ತು ೩೭ ಆಹಾರ ಉದ್ದಿಮೆದಾರರಿಗೆ ನೋಟೀಸ್ ನೀಡಲಾಯಿತು. ಸಾರ್ವಜನಿಕರ ಹಿತದೃಪ್ಠಿಯಿಂದ ಶುಚಿತ್ವ ಕಾಪಾಡಿಕೊಂಡು ಶುದ್ಧವಾದ ಆಹಾರವನ್ನು ಗ್ರಾಹಕರಿಕೆ ನೀಡುವುದು, ಕಾಯ್ದೆಯ ಮಾನದಂಡಗಳಿಗೆ ಮೀರಿ ಕೃತಕ ಬಣ್ಣಗಳನ್ನು ಆಹಾರ ತಯಾರಿಕೆ ಬಳಸುವುದನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಎಂಬ ಮಾಹಿತಿಯನ್ನು ಈ ಆಂದೋಲನದಲ್ಲಿ ಸೂಚಿಸಲಾಯಿತು ಎಂದು ಜಿಲ್ಲೆಯ ಅಂಕಿತಾಧಿಕಾರಿ ಡಾ.ಇ.ಅನಿಲ್ ಧಾವನ್ ತಿಳಿಸಿದರು.


ಆಯುಕ್ತರು(ಎಫ್.ಎಸ್.ಎಸ್.ಎ) ಅವರ ಸೂಚನೆಯಂತೆ ಸೋಮವಾರ ವಿಶೇಷವಾದ ಆಂದೋಲನವನ್ನು ಹಮ್ಮಿಕೊಂಡು ಜಿಲ್ಲೆಯಾದ್ಯಾಂತ ಮೊಟ್ಟೆ, ಕೋಳಿ, ಮಾಂಸ/ಮಾಂಸದ ಪದಾರ್ಥಗಳ ಸಂಗ್ರಹಕರು, ಮಾರಾಟಗಾರರು ಮತ್ತು ತಯಾರಿಕಾ ಸ್ಥಳಗಳಿಗೆ ದಿಢೀರ್ ಭೇಟಿ ನೀಡಿ ಪದಾರ್ಥಗಳನ್ನು ಸೂಕ್ತವಾದ ತಾಪಮಾನದಲ್ಲಿ ಸಂಗ್ರಹಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆಯೇ ಮತ್ತು ತ್ಯಾಜ್ಯ ವಸ್ತುಗಳ ಸೂಕ್ತ ನಿರ್ವಹಣೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲಾಯಿತು. ಹಳೆಯ ಮಾಂಸ/ಮಾಂಸದ ಪದಾರ್ಥಗಳನ್ನು ಕೆಡದಂತೆ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತಿದೆಯೇ ಎಂಬ ಬಗ್ಗೆಯೂ ಪರಿಶೀಲನೆಯನ್ನು ನಡೆಸಿ ಸಂಶಯಾಸ್ಪದ ೧೧ ಆಹಾರ ಪದಾರ್ಥಗಳನ್ನು ಸಂಗ್ರಹಿಸಲಾಯಿತು ಎಂದು ತಿಳಿಸಿದರು.


ಆಂದೋಲನದಲ್ಲಿ ಕೊಡಗು ಜಿಲ್ಲೆಯ ಹಿರಿಯ ಆಹಾರ ಸುರಕ್ಷತಾಧಿಕಾರಿ ಜೆ.ಎನ್.ಮಂಜುನಾಥ್ ಹಾಗೂ ವಿರಾಜಪೇಟೆ ತಾಲೂಕು ಆಹಾರ ಸುರಕ್ಷತಾಧಿಕಾರಿಯಾದ ಕೆ.ಆರ್.ನವೀನ್ ಕುಮಾರ್ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net