

ವಿಜಯವಾಣಿ ಸುದ್ದಿಜಾಲ ಧಾರವಾಡ
ಸರ್ಕಾರ ಪ್ರೋತ್ಸಾಹ ಧನ ಅಥವಾ ಸಹಾಯ ಧನವನ್ನು ರೈತರ, ಜನರ ಜೀವನೋಪಾಯಕ್ಕೆ ನೀಡುತ್ತದೆ. ಹೀಗಾಗಿ ಬರ ಪರಿಹಾರ ಹಣ ಸೇರಿ ಸರ್ಕಾರದ ಯಾವುದೇ ಪ್ರೋತ್ಸಾಹ ಧನ, ಲಾನುಭವಿಗಳ ಖಾತೆಗೆ (ಡಿಬಿಟಿ ಮೂಲಕ) ಸಂದಾಯ ಮಾಡುವ ಹಣವನ್ನು ಸಾಲದ ಖಾತೆಗೆ ಜಮೆ ಮಾಡಬಾರದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದರು.
ಸರ್ಕಾರದಿಂದ ಬಿಡುಗಡೆ ಮಾಡಿರುವ ಬರ ಪರಿಹಾರವನ್ನು ಸಾಲದ ಖಾತೆಗೆ ಜಮೆ ಆಗುತ್ತಿರುವ ಕುರಿತು ರೈತರಿಂದ ದೂರು ಬಂದ ಕಾರಣಕ್ಕೆ ನಗರದ ರುಡ್ಸೆಟ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಅವರು ಸೂಚನೆ ನೀಡಿದರು.
ಸರ್ಕಾರ ನೀಡುವ ಹಣವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡದೆ ಗ್ರಾಹಕರ ಉಪಯೋಗಕ್ಕೆ ನೀಡಬೇಕಲ್ಲದೆ, ಅವರೊಂದಿಗೆ ಸಂಯಮದಿಂದ ವತಿರ್ಸಬೇಕು. ತಾಂತ್ರಿಕ ಸಮಸ್ಯೆ ಇದ್ದರೆ ಗ್ರಾಹಕರಿಗೆ ತಿಳಿವಳಿಕೆ ನೀಡಿ ಮಾರ್ಗದರ್ಶನ ಮಾಡಿ ತ್ವರಿತವಾಗಿ ಸಮಸ್ಯೆ ಪರಿಹರಿಸಬೇಕು ಎಂದರು.
ಜಿಲ್ಲೆಯಲ್ಲಿ ಬ್ಯಾಂಕ್ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರದ ಯೋಜನೆಗಳ ಲಾಭ ತಲುಪಿಸುತ್ತಿವೆ. ಆದರೆ ಎಲ್ಲ ಬ್ಯಾಂಕ್ಗಳು ಇದನ್ನು ಅನುಸರಿಸಬೇಕು. ಸರಿಯಾದ ಸಮಯಕ್ಕೆ ಉದ್ಯೋಗಿಗಳಿಗೆ ಸಾಲ, ಸಹಾಯಧನ ಸೌಲಭ್ಯ ದೊರೆಯಬೇಕು. ರೈತರ ಸಹಮತ ಇಲ್ಲದೆ ಬರ ಪರಿಹಾರ ಸೇರಿ ಯಾವ ಪ್ರೋತ್ಸಹಧನವನ್ನು ಸಾಲಕ್ಕೆ ಜಮೆ ಮಾಡಬಾರದು. ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಎಲ್ಲ ಬ್ಯಾಂಕ್ ಶಾಖೆಗಳಿಗೆ ಮಾಹಿತಿ ನೀಡಬೇಕು ಎಂದರು.
ಲೀಡ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. ಮಾತನಾಡಿ, ಜಿಲ್ಲೆಯ ಬ್ಯಾಂಕ್ಳಿಂದ 2,90,392 ಲಾನುಭವಿಗಳು ಕೃಷಿ ಸಾಲ ಪಡೆದಿದ್ದಾರೆ. 2024&25ನೇ ಸಾಲಿನಲ್ಲಿ ಬೆಳೆ ಸಾಲ ವಲಯದಲ್ಲಿ 1,27,283 ಲಾನುಭವಿಗಳು ಇದ್ದು, ಮಾರ್ಚ್ 2024ರ ಅಂತ್ಯಕ್ಕೆ 1,640.27 ಕೋಟಿ ರೂ. ಗುರಿ ಹೊಂದಿದೆ. 2291.25 ಕೋಟಿ ರೂ.ಗಳಷ್ಟು ಸಾಧನೆ ಮಾಡಲಾಗಿದೆ ಎಂದರು.
ಆರ್ಬಿಐ ಅಧಿಕಾರಿ ಮೋನಿ ರಾಜ ಬ್ರಹ್ಮ ಮಾತನಾಡಿ, ಆರ್ಬಿಐ ಮಾರ್ಗಸೂಚಿ ಮತ್ತು ನೀತಿ ವಿವರಿಸಿದರು. ಗ್ರಾಹಕರಿಗೆ ಅನೌಪಚಾರಿಕ ಮೂಲಗಳಿಂದ ಪಡೆದ ಸಾಲಗಳಿಂದ ಉಂಟಾಗುವ ತೊಂದರೆಗಳ ಬಗ್ಗೆ ವಿವರಿಸಿ, ಔಪಚಾರಿಕ ಮೂಲಗಳಿಂದ ಸಾಲ ಪಡೆಯಲು ಪ್ರೋತ್ಸಾಹಿಸಬೇಕು. ಸೈಬರ ವಂಚನೆ, ಸೈಬರ್ ಅಪರಾಧಗಳನ್ನು ವರದಿ ಮಾಡಲು ಸ್ಥಾಪಿಸಿರುವ ಸಹಾಯವಾಣಿ 1930 ಬಗ್ಗೆ ಗ್ರಾಹಕರಲ್ಲಿ ತಿಳಿವಳಿಕೆ ನೀಡಬೇಕು ಎಂದರು.
ಎಸ್ಬಿಐ, ಕೆನರಾ, ಕೆವಿಜಿಬಿ, ಬ್ಯಾಂಕ್ ಆ್ ಬರೋಡಾ, ಯುನಿಯನ್ ಬ್ಯಾಂಕ್ ಆ್ ಇಂಡಿಯಾ ಸೇರಿ ಜಿಲ್ಲೆಯ ಎಲ್ಲ ಬ್ಯಾಂಕ್ಗಳ ಅಧಿಕಾರಿಗಳು, ಇತರರು ಇದ್ದರು.