ರೈಲ್ವೆ ಪರೀಕ್ಷೆ ಸಂದರ್ಭ ಧರ್ಮ ಸೂಚಕ ಸಂಕೇತ ತೆರವುಗೊಳಿಸದಂತೆ ಸೂಚನೆ

Published on

ಮಂಗಳೂರು: ರೈಲ್ವೇ ಇಲಾಖೆ ನೇಮಕಾತಿ ಪರೀಕ್ಷೆ ಸಂದರ್ಭ ಧರ್ಮ ಸೂಚಕ ಸಂಕೇತಗಳನ್ನು ತೆರವುಗೊಳಿಸದಂತೆ ರೈಲ್ವೆ ಇಲಾಖೆಯ ರಾಜ್ಯ ಸಚಿವ ಸಚಿವ ಸೋಮಣ್ಣ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಎಪ್ರಿಲ್ 29ರಂದು ದೇಶಾದ್ಯಂತ ನಸಿರ್ಂಗ್ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಭಾರತೀಯ ರೈಲ್ವೇ ಪರೀಕ್ಷೆ ಹಮ್ಮಿಕೊಂಡಿದ್ದು ಪ್ರವೇಶ ಪತ್ರದಲ್ಲಿ ಅಭ್ಯರ್ಥಿಗಳು ಯಾವುದೇ ಧಾರ್ಮಿಕ ಚಿಹ್ನೆಗಳನ್ನೂ ಧರಿಸುವಂತಿಲ್ಲ. ಅಲ್ಲದೆ, ಮಂಗಳಸೂತ್ರ, ಜನಿವಾರ, ಬಳೆ, ತಿಲಕ ಇನ್ನಿತರ ಎಲ್ಲ ಸಂಕೇತಗಳನ್ನು ತೆಗೆದಿಟ್ಟು ಪರೀಕ್ಷಾ ಕೊಠಡಿಗೆ ಬರಬೇಕೆಂದು ಸೂಚನೆ ನೀಡಲಾಗಿತ್ತು. ಈ ಬಗ್ಗೆ ಪರಿಕ್ಷಾರ್ಥಿಗಳ ಪರ ವಿಜಯವಾಣಿ ಸಮಗ್ರ ವರದಿಯನ್ನೂ ಮಾಡಿ ಸರ್ಕಾರದ ಗಮನ ಸೆಳೆದಿತ್ತು. ರೈಲ್ವೆ ಇಲಾಖೆಯ ಸೂಚನೆಯು ಸಾರ್ವಜನಿಕ ವಲಯದಲ್ಲಿ ಆಕ್ಷೇಪ ಕೇಳಿಬರುತ್ತಿದ್ದಂತೆ ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ. ಸೋಮಣ್ಣ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಜನಿವಾರ, ಮಂಗಳಸೂತ್ರ, ತಿಲಕ ಇನ್ನಿತರ ಧಾರ್ಮಿಕ ಚಿಹ್ನೆಗಳನ್ನು ತೆಗೆಯದಂತೆ ಸಚಿವರ ಮೂಲಕ ಅಧಿಕಾರಿಗಳಿಗೆ ಸೂಚನೆ ರವಾನಿಸಿದ್ದಾರೆ.

ರೈಲ್ವೆ ಪರೀಕ್ಷೆ ಸಂದರ್ಭ ಹಿಂದು ಧಾರ್ಮಿಕ ಸಂಕೇತ ತೆರವು ವಾಡುವುದನ್ನು ಸಹಿಸುವುದಿಲ್ಲ ಎಂದು ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಂಗಳೂರಿನಲ್ಲಿ ಗುಡುಗಿದ್ದ ಬೆನ್ನಲ್ಲೇ ರೈಲ್ವೆಯ ಇಂತಹ ಆದೇಶವನ್ನು ಕಾಂಗ್ರೆಸ್ ಪರ ಎಂಎಲ್‌ಸಿ ಐವನ್ ಡಿಸೋಜಾ ಕೋಡ ವಿರೋಧಿಸಿದ್ದರು. ಈ ಮಧ್ಯೆ ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ರಾಜ್ಯ ಸರ್ಕಾರದ ವಿರುದ್ದ ಅಸವಾಗಿ ಬಳಸಿಕೊಂಡಿದ್ದ ಬಿಜೆಪಿಗೆ ರೈಲ್ವೆ ಪರೀಕ್ಷೆ ವಿಚಾರ ಮುಜುಗರ ಕೋಡ ತಂದಿತ್ತು. ಹಿಂದೂ ಮಹಿಳೆಯರಿಗೆ ಮಂಗಳಸೂತ್ರ, ವೈದಿಕ ಪರಂಪರೆಯ ಜನಿವಾರ ಕರಾವಳಿಯ ಭಾವನಾತ್ಮಕ ವಿಚಾರವಾಗಿದ್ದು, ಹಿಂದೂಗಳ ಭಾವನೆದಕ್ಕೆಯಾದರೆ ಹೋರಾಟದ ಎಚ್ಚರಿಕೆಯನ್ನೂ ವಿಎಚ್‌ಪಿ ನೀಡಿತ್ತು. ಇದರ ದ.ಕ ಸಂಸದರು ಹಾಗೂ ರೈಲ್ವೇ ರಾಜ್ಯ ಸಚಿವರ ಮಾತುಕತೆಯಿಂದ ಗೊಂದಲಕ್ಕೆ ತೆರೆಎಳೆಯಲಾಗಿದೆ.

------------------

ರೈಲ್ವೆ ಪರೀಕ್ಷೆ ಸಂದರ್ಭ ಧರ್ಮ ಸೂಚಕ ಸಂಕೇತಗಳನ್ನು ತೆರವುಗೊಳಿಸದಂತೆ ನೀಡಿದ ಆದೇಶ ಗೊಂದಲದ ಬಗ್ಗೆ ಸಚಿವ ಸೋಮಣ್ಣ ಅವರಿಗೆ ಮಾಹಿತಿ ನೀಡಿದ್ದು, ಈ ವಿಚಾರದಲ್ಲಿ ತುರ್ತಾಗಿ ಸ್ಪಂದಿಸಿದ್ದಾರೆ. ಧಾರ್ಮಿಕ ಚಿಹ್ನೆ ಅಥವಾ ಮಂಗಳಸೂತ್ರ, ಜನಿವಾರದಂತಹ ಯಾವುದೇ ಧರ್ಮ ಸೂಚಕ ಸಂಕೇತಗಳನ್ನು ತೆರವುಗೊಳಿಸದಂತೆ ಪರಿಕ್ಷಾ ಕರ್ತವ್ಯದ ಅಧಿಕಾರಿಗಳಿಗೆ ಸೂಚನೆ ರವಾನಿಸಿದ್ದಾರೆ.

-ಕ್ಯಾ. ಬ್ರಿಜೇಶ್ ಚೌಟ, ದ.ಕ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net