

ಮುಂಡರಗಿ: ಸ್ವಾತಂತ್ರ್ಯೊತ್ಸವವು ರಾಷ್ಟ್ರೀಯ ಆಚರಣೆಯಾಗಿದ್ದು, ಎಲ್ಲ ಶಾಲಾ, ಕಾಲೇಜು ಹಾಗೂ ಸರ್ಕಾರಿ ಇಲಾಖೆಗಳಲ್ಲಿ ಧ್ವಜಾರೋಹಣ ನೆರವೇರಿಸಿ, ನಂತರ ಜಗದ್ಗುರು ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಬೇಕು ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಸೂಚಿಸಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೊತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಾಡಳಿತದಿಂದ ಆ. 15ರಂದು ಜರುಗುವ ಧ್ವಜಾರೋಹಣ ಸಮಾರಂಭದಲ್ಲಿ ಕೆಲ ಅಧಿಕಾರಿಗಳು ಕಾಟಾಚಾರಕ್ಕೆ ಪಾಲ್ಗೊಂಡು ತಕ್ಷಣಕ್ಕೆ ನಿರ್ಗಮಿಸುತ್ತಾರೆ. ಆ ರೀತಿ ನಡೆದುಕೊಂಡರೆ ಅಂತಹ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ಸ್ವಾತಂತ್ರ್ಯೊತ್ಸವದಲ್ಲಿ ಪ್ರತಿಯೊಬ್ಬರೂ ಸಡಗರ, ಸಂಭ್ರಮದಿಂದ ಪಾಲ್ಗೊಳ್ಳಬೇಕು. ವಿವಿಧ ಕ್ಷೇತ್ರಗಳ ಸಾಧಕರನ್ನು ಅಂದು ಸನ್ಮಾನಿಸೋಣ ಎಂದರು.
ಮಂಜುನಾಥ ಮುಧೋಳ, ಬಸವರಾಜ ನವಲಗುಂದ, ವೀರಣ್ಣ ಗಟ್ಟಿ, ಧ್ರುವಕುಮಾರ ಹೂಗಾರ, ಎಂ.ಜಿ. ಗಚ್ಚಣ್ಣವರ, ಕಾಶೀನಾಥ ಸಿರಬಡಗಿ, ಲಕ್ಷ್ಮಣ ತಗಡಿನಮನಿ, ಅಡಿವೆಪ್ಪ ಚಲವಾದಿ, ರವಿಗೌಡ ಪಾಟೀಲ, ಸೊಮಣ್ಣ ಹೈತಾಪೂರ, ಅಶ್ವಿನಿ ಬಿಡನಾಳ, ಮಂಜುಳಾ ಇಟಗಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.