ನಿರಂತರ ವಿದ್ಯುತ್ ಪೂರೈಕೆಗೆ ಸೂಚನೆ

ckm mescom
ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಮೆಸ್ಕಾಂ ಗ್ರಾಹಕರ ಸಭೆಯನ್ನು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಪದ್ಮಾವತಿ ಉದ್ಘಾಟಿಸಿದರು. ಎಚ್.ಬಸಪ್ಪ, ಎಚ್.ಜಿ.ರಮೇಶ್, ಮೌರಿಸ್ ಡಿಸೋಜಾ, ಎಚ್.ಆರ್.ದಿನೇಶ್ ಇದ್ದರು.
Published on

ಚಿಕ್ಕಮಗಳೂರು: ನಿರಂತರ ವಿದ್ಯುತ್ ಪೂರೈಕೆ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮೆಸ್ಕಾಂ ಸಿದ್ಧವಾಗಿದ್ದು, ಗ್ರಾಮೀಣ ಭಾಗದಲ್ಲಿ ಕೈಗಾರಿಕೆಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಅಧೀಕ್ಷಕ ಇಂಜಿನಿಯರ್‌ಗೆ ಸೂಚಿಸಲಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಪದ್ಮಾವತಿ ತಿಳಿಸಿದರು.

ರತ್ನಗಿರಿ ರಸ್ತೆಯ ಮೆಸ್ಕಾಂ ನೌಕರರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮೆಸ್ಕಾಂ ಗ್ರಾಹಕರ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳು, ಆರೋಗ್ಯ ಇಲಾಖೆ ಹಾಗೂ ಕೈಗಾರಿಕೆಗಳಿಗೆ ಕೊರತೆಯಾಗದಂತೆ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು. ಗ್ರಾಹಕರಿಗೆ ತೊಂದರೆಯಾಗದ ರೀತಿಯಲ್ಲಿ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಶಿವಮೊಗ್ಗ ವಲಯದ ಮುಖ್ಯ ಇಂಜಿನಿಯರ್ ಎಚ್.ಬಸಪ್ಪ, ಮಂಗಳೂರಿನ ಮೆಸ್ಕಾಂ ತಾಂತ್ರಿಕ ನಿರ್ದೇಶಕ ಎಚ್.ಜಿ.ರಮೇಶ್, ಮುಖ್ಯಆರ್ಥಿಕ ಅಧಿಕಾರಿ ಮೌರಿಸ್ ಡಿಸೋಜಾ, ಅಧೀಕ್ಷಕ ಇಂಜಿನಿಯರ್ ಎಚ್.ಆರ್.ದಿನೇಶ್, ನಿಯಂತ್ರಣಾಧಿಕಾರಿ ಮುರಳೀಧರ ನಾಯ್ಕ, ಆರ್ಥಿಕ ಸಲಹೆಗಾರ ಹರಿಶ್ಚಂದ್ರ ಬೋರ್ಕುರ್, ಶಿವಮೊಗ್ಗ ವಲಯ ನಿಯಂತ್ರಣಾಧಿಕಾರಿ ಮಳ್ಳಿ ಶ್ಯಾಮಸುಂದರ್, ಚಿಕ್ಕಮಗಳೂರು ವೃತ್ತ ಅಧೀಕ್ಷಕ ಇಂಜಿನಿಯರ್ ಜೆ.ಎಸ್.ಲೋಕೇಶ್, ಉಪನಿಯಂತ್ರಣಾಧಿಕಾರಿ ಎನ್.ಪ್ರದೀಪ್‌ಕುಮಾರ್, ಶಿವಮೊಗ್ಗ ಅಧೀಕ್ಷಕ ಇಂಜಿನಿಯರ್ ಕೆ.ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net