ಕರ್ಜೆಯ ಟ್ಯಾಂಕ್ ತೆರವಿಗೆ ಸೂಚನೆ

tank
ಕರ್ಜೆಯ ಓವರ್‌ಹೆಡ್ ಟ್ಯಾಂಕನ್ನು ಶಾಸಕ ಯಶ್‌ಪಾಲ್ ಸುವರ್ಣ ನಪರಿಶೀಲಿಸಿದರು. ಕರ್ಜೆ ಗ್ರಾಪಂ ಅಧ್ಯಕ್ಷ ಇನಕರ ಶೆಟ್ಟಿ, ಪ್ರಮುಖರಾದ ಸುರೇಶ್ ಶೆಟ್ಟಿ, ನವೀನ್ ಪುತ್ರನ್, ರಾಜೀವ್ ಕುಲಾಲ್, ಆದರ್ಶ ಶೆಟ್ಟಿ ಮತ್ತಿತತರು ಇದ್ದರು.
Published on

ಕೊಕ್ಕರ್ಣೆ: ಕರ್ಜೆ ಗ್ರಾಮ ಪಂಚಾಯಿತಿ ಹೊಸೂರು ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಾಣಗೊಂಡ 25 ಸಾವಿರ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ಕಳಪೆ ಕಾಮಗಾಯಿಂದಾಗಿ ವಾಲಿ ಕೊಂಡಿರುವ ಸ್ಥಿತಿಯಲ್ಲಿದೆ. ಕಾಮಗಾರಿ ಹಾಗೂ ಪೈಪ್ ಗುಣಮಟ್ಟದ ಬಗ್ಗೆ ಗ್ರಾಮ ಪಂಚಾಯಿತಿ ಹಾಗೂ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಟ್ಯಾಂಕ್ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿ, ವರದಿ ಪಡೆಯುವಂತೆ ಸೂಚಿಸಿದರು.

ಜಲಜೀವನ್ ಮಿಷನ್ ಯೋಜನೆಯಡಿ ನಡೆದ ಎಲ್ಲ ಕಾಮಗಾರಿಗಳ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವರಿಕೆ ಮಾಡುವುದಾಗಿ ತಿಳಿಸಿದರು.

ಕರ್ಜೆ ಗ್ರಾಪಂ ಅಧ್ಯಕ್ಷ ಇನಕರ ಶೆಟ್ಟಿ, ಪ್ರಮುಖರಾದ ಸುರೇಶ್ ಶೆಟ್ಟಿ, ನವೀನ್ ಪುತ್ರನ್, ರಾಜೀವ್ ಕುಲಾಲ್, ಆದರ್ಶ ಶೆಟ್ಟಿ, ವಿನುತ್ ಶೆಟ್ಟಿ, ರತ್ನಾಕರ ಸುವರ್ಣ, ಸಂದೀಪ್ ಸುವರ್ಣ ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net