ಅಸಾಧ್ಯವಾದುದು ಯಾವುದೂ ಇಲ್ಲ

26KHANAPUR11
Published on

ಖಾನಾಪುರ: ವಿದ್ಯಾರ್ಥಿ ಜೀವನ ಒಂದು ತಪಸ್ಸು. ಗುರಿ ಮುಟ್ಟುವ ಮನಸ್ಸಿನೊಂದಿಗೆ ಮುನ್ನಡೆದರೆ ಸಾಧನೆ ಮಾಡಬಹುದು ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಇಲ್ಲಿನ ಕೆಎಲ್​ಇ ಸಂಸ್ಥೆಯ ಎಂ.ಎಸ್​. ಹೊಸಮನಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡೆ ಹಾಗೂ ಸಾಂಸತಿಕ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ, ಶ್ರದ್ಧೆ ಹಾಗೂ ಗುರುಭಕ್ತಿ ಅವಶ್ಯ. ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆರೋಗ್ಯ ಕಾಪಾಡಿಕೊಂಡು ನಾಡನ್ನು ಕಟ್ಟುವ ಕೆಲಸದಲ್ಲಿ ಯುವಜನರು ತೊಡಗಿಸಿಕೊಳ್ಳಬೇಕು ಎಂದರು.

ಕಾಲೇಜು ಅಭಿವದ್ಧಿ ಸಮಿತಿ ಸದಸ್ಯ ಬಸವರಾಜ ಹೊಂಡದಕಟ್ಟಿ ಮಾತನಾಡಿ, ಸ್ಪರ್ಧಾತ್ಮಕ ಪ್ರಪಂಚವನ್ನು ಎದುರಿಸಿ ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳಬೇಕು ಎಂದರು. ಕಾಲೇಜು ಅಭಿವದ್ಧಿ ಸಮಿತಿ ಅಧ್ಯ ಆರ್​.ಡಿ. ಹಂಜಿ ಮಾತನಾಡಿ, ಕಲಿಯುವ ಅವಕಾಶ ಸಿಕ್ಕಾಗ ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ವಿಜಯ ಕಲ್ಮಠ ಪ್ರಾಸ್ತಾವಿಕ ಮಾತನಾಡಿದರು. ಕಳೆದ ಶೆಣಿಕ ವರ್ಷದ ಪರೀೆಯಲ್ಲಿ ಹೆಚ್ಚು ಅಂಕ ಪಡೆದು ತಾಲೂಕಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಲಕ್ಷಿ$್ಮ ಪಾಟೀಲ ಹಾಗೂ ಕಾಲೇಜಿಗೆ ಪ್ರಥಮ ದ್ವೀತಿಯ, ತತೀಯ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿಡಿಸಿ ಸದಸ್ಯರಾದ ಸಿ.ಎಸ್​. ಕೊಡೊಳ್ಳಿ, ಜಯಶ್ರೀ ಹೊಸಮನಿ, ಸಂತೋಷ ಹಂಜಿ, ಪತ್ರಕರ್ತ ಅಲ್ತ್​ಾ ಬಸರೀಕಟ್ಟಿ, ದಿನಕರ ಮರಗಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net