ಉರ್ದು ಶಾಲಾ ಮಕ್ಕಳಿಗೆ ನೋಟ್ ಪುಸ್ತಕ, ಸಮವಸ್ತ್ರ ವಿತರಣೆ

gan (2)
Published on

ಗಂಗೊಳ್ಳಿ: ಇಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ನೋಟ್ ಪುಸ್ತಕಗಳು ಹಾಗೂ ಸಮವಸ್ತ್ರವನ್ನು ಸೋಮವಾರ ವಿತರಿಸಲಾಯಿತು.

ಗಂಗೊಳ್ಳಿ ಗ್ರಾಪಂ ಸದಸ್ಯೆ ಜಯಂತಿ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷ ಮಹಮ್ಮದ್ ತಬ್ರೇಜ್, ಧಮಾಮ್ ಘಟಕದ ಸದಸ್ಯ ಮಹಮ್ಮದ್ ಸವೂದ್ ಶೇಖ್, ಮಸ್ಕತ್ ಘಟಕದ ಅಧ್ಯಕ್ಷ ಇಸ್ಮಾಯಿಲ್, ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಗೋಪಾಲ ಪೂಜಾರಿ, ಗುತ್ತಿಗೆದಾರ ಕೆ.ಆರ್.ನಾಯ್ಕ ಕುಂದಾಪುರ, ದುಬೈ ಘಟಕದ ಸದಸ್ಯರಾದ ರಿಝ್ವನ್, ಅನಿಫ್ ಇಕ್ಬಾಲ್, ಅಫಾನ್ ಫೈಝಲ್ ಶಾಬುದ್ದೀನ್, ಎಸ್‌ಡಿಎಂಸಿ ಅಧ್ಯಕ್ಷ ಮೌಲಾನಾ ಅಬ್ದುಲ್ ಹಾದಿ, ಮಾಜಿ ಅಧ್ಯಕ್ಷ ನೂರ್ ಫಾಜಿಲ್, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶಾಬುದ್ದೀನ್ ಅವೂಫ್, ಖಜಾಂಚಿ ರೆಹಮತುಲ್ಲಾ, ದೈಹಿಕ ಶಿಕ್ಷಣ ಶಿಕ್ಷಕಿ ಸುಮತಿ, ಶಿಕ್ಷಕಿಯರಾದ ಸವಿತಾ, ಭಾರತಿ ಕಲ್ಕೂರ, ಗೌರವ ಶಿಕ್ಷಕಿಯರಾದ ಸುಬಿಯಾ ನೌಶೀನ್ ನಾಝ್ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕಿ ಹೇಮಾವತಿ ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಅಬ್ದುಲ್ ಹಮೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಶಿಕ್ಷಕಿ ಸುಲೋಚನಾ ವಂದಿಸಿದರು. ಶಿಕ್ಷಕ ಇಮ್ರಾನ್ ಖಾನ್ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net