ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ

31spt1
ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೆಂಗಳೂರಿನ ಪ್ರಣವ್ ಫೌಂಡೇಶನ್‌ನಿಂದ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಪ್ರೇಮ್‌ಸಾಗರ್, ಸಜನ್, ಆಶೀತ್, ಪರಮೇಶ್ ಇದ್ದರು.
Published on

ಸೋಮವಾರಪೇಟೆ: ಬೆಂಗಳೂರಿನ ಪ್ರಣವ್ ಫೌಂಡೇಶನ್ ವತಿಯಿಂದ ತಾಲೂಕಿನ ಶಾಂತಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗುರುವಾರ ನೋಟ್‌ಬುಕ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಗುರುಪ್ರಸಾದ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಈ ಅವಕಾಶವನ್ನು ಪಾಲಕರು ಸದುಪಯೋಗಪಡಿಸಿಕೊಳ್ಳಬೇಕು. ಪ್ರಣವ್ ಫೌಂಡೇಶನ್ ಜನಪರ ಕೆಲಸಗಳು ಶ್ಲಾಘನೀಯ ಎಂದರು.

ಫೌಂಡೇಶನ್‌ನ ಪದಾಧಿಕಾರಿಗಳಾದ ಪ್ರೇಮ್ ಸಾಗರ್, ಸಜನ್ ಮಂದಣ್ಣ, ಕೆ.ಪಿ.ಆಶೀತ್ ಶಾಲೆಯ ಮುಖ್ಯಶಿಕ್ಷಕ ಪರಮೇಶ್, ಸ್ಥಳೀಯರಾದ ಡಿ.ಎಸ್.ಲಿಂಗರಾಜು, ಕೆ.ಎಂ.ಕೃಷ್ಣಕುಮಾರ್, ಮಧುಕುಮಾರ್, ಧರ್ಮಪ್ಪ, ನಿಶಾಂತ್, ಕಿರಣ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net