ನೋಟು ಕಂಡು ಬೆಚ್ಚಿದ ಜನರು

H20-UK2-Web
Published on

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಕುರಣಿ ಗ್ರಾಮದ ಸಿದ್ದಣ್ಣ ಗಿಡಗಾರ ಎಂಬುವರು ಡೀಸೆಲ್ ತರಲು ಹೋಗುವಾಗ ಜೇಬಿನಿಂದ ಬಿದ್ದ ನೋಟುಗಳು ಅವಾಂತರಕ್ಕೆ ಕಾರಣವಾಗಿ ಜನ ಬೆಚ್ಚಿ ಬೀಳುವಂತಾಯಿತು. ಸೋಮವಾರ ಬೆಳಗ್ಗೆ 11.30ಕ್ಕೆ ಚಿಕ್ಕಾಲಗುಡ್ಡ ಗ್ರಾಮದ ಕಲ್ಮೇಶ್ವರ ಬ್ಯಾಂಕ್ ವ್ಯಾಪ್ತಿಯಲ್ಲಿ 100 ರೂ. ಮುಖಬೆಲೆಯ ನೋಟುಗಳು ಬಿದ್ದಿದ್ದವು. ಆದರೆ, ಗ್ರಾಮಸ್ಥರು ಆ ನೋಟುಗಳನ್ನು ಮುಟ್ಟದೆ ಅವು ಹಾರಾಡದಂತೆ ಅವುಗಳ ಮೇಲೆ ಕಲ್ಲು ಇಟ್ಟರು. ನಂತರ ಹಣ ಯಾರಿಗೆ ಸೇರಿದ್ದು ಎಂಬುದನ್ನು ಪರಿಶೀಲಿಸಿದಾಗ ಅಸಲಿಯತ್ತು ಬಯಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net