

ಧಾರವಾಡ ತಾಲೂಕಿನ ಮುಮ್ಮಿಗಟ್ಟಿಯ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಇಲ್ಲಿನ ವಿಪ್ರ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ವತಿಯಿಂದ ಮಕ್ಕಳಿಗೆ ನೋಟ್ಬುಕ್ ಹಾಗೂ ಗಣಿತ ಕ್ಯಾಲೆಂಡರ್ ಅನ್ನು ಇತ್ತೀಚೆಗೆ ವಿತರಿಸಲಾಯಿತು. ಪದಾಧಿಕಾರಿಗಳಾದ ಮಾಧವ ಶೂರಪಾಲಿ, ರಾಜೀವ ಪಾಟೀಲಕುಲಕರ್ಣಿ, ಆನಂದ ಸಬನೀಸ್, ಪಿ.ಜಿ. ನರಸಾಪುರ, ವಿನಾಯಕ ಜೋಶಿ, ಶಾಲೆಯ ರಾಘವೇಂದ್ರ ಅಂಬೇಕರ, ವಿದ್ಯಾರ್ಥಿಗಳು, ಇತರರು ಇದ್ದರು.