ಕುಳಿತುಕೊಳ್ಳದಿರಲು ಕಟ್ಟೆ ಮೇಲೆ ಆಯಿಲ್ !

01
Published on

ತೆಲಸಂಗ: ಕರೊನಾ ವೈರಸ್ ಹರಡುವಿಕೆ ತಡೆಯಲು ಪೊಲೀಸರು, ಗ್ರಾಮ ಪಂಚಾಯಿತಿಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಇದಕ್ಕೆ ಕ್ಯಾರೇ ಎನ್ನದ ಯುವಕರಿಗೆ ವಿನೂತನ ರೀತಿಯಲ್ಲಿ ಬಿಸಿ ಮುಟ್ಟಿಸಲು ಗ್ರಾಪಂ ಮುಂದಾಗಿದೆ.

ಯುವಕರು ಹೆಚ್ಚು ಗುಂಪು ಗುಂಪಾಗಿ ಕುಳಿತುಕೊಳ್ಳವ ಗ್ರಾಮದ ಮುಖ್ಯ ಬಜಾರನ ಅಂಗಡಿಗಳ ಮುಂಭಾಗದ ಕಟ್ಟೆಗಳು ಸೇರಿ ವಿವಿಧ ಪ್ರದೇಶಗಳಲ್ಲಿ ಸುಟ್ಟ ಕರಿ ಆಯಿಲ್ ಅನ್ನು ಸುರಿದು ಕುಳಿತುಕೊಳ್ಳಲು ಬಾರದಂತೆ ಮಾಡಿದ್ದಾರೆ.

ಲಾಕ್‌ಡೌನ್ ಆದೇಶವಿದ್ದರೂ ನಿಯಮ ಮೀರಿ ಅಂಗಡಿಗಳ ಮುಂಭಾಗದ ಕಟ್ಟೆ, ಬಯಲು ಮಾರುಕಟ್ಟೆ, ಮರಗಳ ಕೆಳಗಡೆಯ ಕಟ್ಟೆಗಳು, ಮಾರುಕಟ್ಟೆ, ಬೇವಿನ ಕಟ್ಟೆ ಸೇರಿ ವಿವಿಧೆಡೆ ಯುವಕರು ಕುಳಿತು ಮೊಬೈಲ್‌ನಲ್ಲಿ ಕಾಲಹರಣ ಮಾಡುತ್ತಿದ್ದರು. ಪೊಲೀಸರು ಬಂದು ಲಾಠಿ ಬೀಸಿದಾಗ ಓಡಿ ಹೋಗಿ, ಮತ್ತೆ ಬಂದು ಅಲ್ಲಿಯೇ ಕುಳಿತುಕೊಳ್ಳುತ್ತಿದ್ದರು.

ಇದರಿಂದ ಬೇಸತ್ತ ಗ್ರಾಪಂನವರು ಸುಟ್ಟ ಕರಿ ಆಯಿಲ್‌ನ್ನು ಕಟ್ಟೆಗಳ ಮೇಲೆ ಸುರಿದ ಪರಿಣಾಮ ಈಗ ಕಟ್ಟೆಗಳು ಖಾಲಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net