ಮರೆಯುವಂತಿಲ್ಲ ದೇವರಾಜ ಅರಸು ಅವರ ಕ್ರಾಂತಿಕಾರಕ ಯೋಜನೆಗಳು

Kudligi Devarj Aarasu Jayanti
ಕೂಡ್ಲಿಗಿಯಲ್ಲಿ ಏರ್ಪಡಿಸಿದ್ದ ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಟಿ.ಜಗದೀಶ್ ಮಾತನಾಡಿದರು.
Published on

ಕೂಡ್ಲಿಗಿ: ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ಮೌನ ಕ್ರಾಂತಿ ಮೂಲಕ ನಾಡಿನ ಭೂರಹಿತರಿಗೆ 7 ಲಕ್ಷ ಹೆಕ್ಟೇರ್ ಭೂ ಒಡೆತನ ನೀಡುವ ಮೂಲಕ ಜನರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ತಹಸೀಲ್ದಾರ್ ಟಿ.ಜಗದೀಶ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ತಾಲೂಕು ಆಡಳಿತ ಭಾನುವಾರ ಏರ್ಪಡಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತಾನಾಡಿದರು.

ಅರಸು ಅವರ ಅವಧಿಯಲ್ಲಿ ಜೀತ ಪದ್ಧತಿ ನಿಷೇಧ, ಸಾಲದ ಜಾಲದಿಂದ ಬಿಡುಗಡೆ, ಬಡವರಿಗೆ ಸೂರು, ನೀರು, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿ ಗೌರವಯುತ ಬದುಕು ನಡೆಸಲು ನೆರವಾದರು. ಅವರ ಕ್ರಾಂತಿಕಾರಕ ಯೋಜನೆಗಳು ಮರೆಯುವಂತಿಲ್ಲ ಎಂದರು.

ನಿಲಯ ಪಾಲಕ ಹುಲುಗಪ್ಪ ಮಾತಾನಾಡಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಸಂಘದ ರಾಜ್ಯ ಪರಿಷತ್ ಸದಸ್ಯ ಸಿರಬಿ ಅಂಜಿನಪ್ಪ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಬಿಇಒ ಪದ್ಮನಾಭ ಕರ್ಣಂ, ಜಿಪಂ ಎಇಇ ಮಲ್ಲಿಕಾರ್ಜುನ, ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್, ಬಿಸಿಎಂ ಅಧಿಕಾರಿ ಪಂಪಾಪತಿ ಇತರರಿದ್ದರು.

ಬಿಸಿಎಂ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಆಂಜನೇಯ ದೇವಸ್ಥಾನದಿಂದ ಅಲಂಕೃತ ವಾಹನದಲ್ಲಿ ಅರಸು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net