ನೂರಕ್ಕೆ ನೂರರು ಬಗೆಹರಿಸುತ್ತೇನೆ ಎನ್ನಲ್ಲ

6 smg 2
ಕಂದಾಯ ಭೂಮಿಯಲ್ಲಿರುವ ಮನೆಗಳಿಗೆ ಅಕ್ರಮ- ಸಕ್ರಮ ದಡಿಯಲ್ಲಿ ಖಾತೆ ನೀಡುವಂತೆ ಸಚಿವ ಕೃಷ್ಣಭೈರೇಗೌಡ ಅವರಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕಿ ರೇಖಾ ರಂಗನಾಥ್ ಮನವಿ ಮಾಡಿದರು. ಆರ್.ಪ್ರಸನ್ನಕುಮಾರ್, ಎಚ್.ಸಿ.ಯೋಗೇಶ್ ಇತರರಿದ್ದರು.
Published on

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಶೇ.90 ಭೂ ಮಂಜೂರಾತಿಗೆ ಸಂಬಂಧಿಸಿದ ಸಮಸ್ಯೆಗಳೇ ಇದ್ದು, ಎಲ್ಲವನ್ನೂ ಬಗೆಹರಿಸಲು ಆಗದಿದ್ದರೂ ಸಾಧ್ಯವಾದಷ್ಟು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದರು.
ನಗರದ ಕಾಂಗ್ರೆಸ್ ಕಚೇರಿಗೆ ಬುಧವಾರ ಭೇಟಿ ನೀಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಭೂ ಮಂಜೂರಾತಿ ಸಮಸ್ಯೆ ಕುರಿತಂತೆ ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿಗಳ ಜತೆ ಒಂದು ಸುತ್ತಿನ ಸಭೆ ನಡೆಸಲಾಗಿದೆಎಂದರು.
ಸರ್ಕಾರ ಬಂದ ಮೇಲೆ ಜನಪರವಾಗಿ ಕೆಲಸ ಮಾಡುತ್ತಿದ್ದೇವೆ. ಚುನಾವಣೆಗೆ ಮೊದಲು ಕೊಟ್ಟ ಮಾತುಗಳನ್ನು ಶರವೇಗದಲ್ಲಿ ಅನುಷ್ಠಾನ ಮಾಡಿದ್ದೇವೆ. ಕೆಲವರು ಆರೋಪ ಮಾಡಿದ್ದರು. ನಮ್ಮ ಪಕ್ಷದಲ್ಲೂ ಕೆಲವರಿಗೆ ಅನುಮಾನವಿತ್ತು. ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಎಲ್ಲರ ಅನುಮಾನಗಳಿಗೆ ಒಂದೇ ಮದ್ದು ನೀಡಲಾಗಿದೆ ಎಂದರು.
ಮಾಜಿ ಎಂಎಲ್ಸಿ ಆರ್.ಪ್ರಸನ್ನಕುಮಾರ್ ಮಾತನಾಡಿ, ಸಬ್‌ರಿಜಿಸ್ಟ್ರರ್ ಕಚೇರಿಯಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ ಯಾವುದೇ ಕೆಲಸಗಳು ಸಸೂತ್ರವಾಗಿ ನಡೆಯುತ್ತಿಲ್ಲ. ಶರಾವತಿ ಸಂತ್ರಸ್ತರ ಸಮಸ್ಯೆಗಳನ್ನು ಈ ಬಾರಿ ಬಗೆಹರಿಸಲೇಬೇಕಿದೆ. ನಾವು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದೆವು. ಈಗ ನಾವು ಮಾಡದಿದ್ದರೆ ಸರಿ ಅನ್ನಿಸುವುದಿಲ್ಲ ಎಂದರು.
ಕಂದಾಯ ಭೂಮಿಯಲ್ಲಿರುವ ಮನೆಗಳಿಗೆ ಅಕ್ರಮ- ಸಕ್ರಮ ದಡಿಯಲ್ಲಿ ಖಾತೆ ನೀಡುವಂತೆ ಸಚಿವ ಕೃಷ್ಣಬೈರೇಗೌಡ ಅವರಿಗೆ ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕಿ ರೇಖಾ ರಂಗನಾಥ್ ಮನವಿ ಮಾಡಿದರು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಕೆಪಿಸಿಸಿ ಸಂಯೋಜಕ ಎಚ್.ಸಿ.ಯೋಗೇಶ್, ಮುಖಂಡರಾದ ಕಲಗೋಡು ರತ್ನಾಕರ್, ಎಸ್.ರವಿಕುಮಾರ್, ಸಿ.ಎಸ್.ಚಂದ್ರಭೂಪಾಲ್, ವಿಜಯಲಕ್ಷ್ಮೀ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net