ದೇವಸ್ಥಾನಗಳ ಇಂಚು ಜಾಗವೂ ಹೆಚ್ಚಿಲ್ಲ

2New JOshi New 2
Published on

ಹುಬ್ಬಳ್ಳಿ : ಕಾಂಗ್ರೆಸ್ಸಿನ ಢೋಂಗಿ ಜಾತ್ಯಾತೀತತೆ ಮತ್ತು ಮುಸ್ಲಿಂ ತುಷ್ಟೀಕರಣದಿಂದಾಗಿ ವಕ್ಪ್ ಆಸ್ತಿ ಹೆಚ್ಚಾಗುತ್ತಿದೆಯೇ ಹೊರತು, ಮುಜರಾಯಿ ದೇವಸ್ಥಾನಗಳ ಒಂದೇ ಒಂದು ಇಂಚು ಜಾಗವೂ ಜಾಸ್ತಿಯಾಗಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದೊಡ್ಡ ಆದಾಯವುಳ್ಳ ದೇವಸ್ಥಾನಗಳ ನಿಯಂತ್ರಣವನ್ನು ರಾಜ್ಯ ಸರ್ಕಾರವೇ ಇರಿಸಿಕೊಂಡಿದೆ ಎಂದು ಹೇಳಿದರು.

ಅನೇಕ ದೊಡ್ಡ ದೊಡ್ಡ ದೇವಸ್ಥಾನಗಳ ಆಡಳಿತ, ನಿಯಂತ್ರಣ ರಾಜ್ಯ ಸರ್ಕಾರದ ಬಳಿ, ಮುಜರಾಯಿ ಇಲಾಖೆ ಬಳಿ ಇದೆ. ಈ ದೇಗುಲಗಳ ಆಸ್ತಿ ಒಂದಿಂಚೂ ಹೆಚ್ಚಿಲ್ಲ. ಈ ದೇಶದ ದೇವಸ್ಥಾನಗಳು ಸಾವಿರಾರು ವರ್ಷಗಳಿಂದ ಇವೆ. ಹಿಂದು ಧರ್ಮವಾಗಲಿ ಅಥವಾ ಭಾರತೀಯ ಯಾವುದೇ ಧರ್ಮವಾಗಲಿ ಹುಟ್ಟಿದಾಗ ದೇಶದೊಳಗೆ ಇಸ್ಲಾಂ ಇರಲೇ ಇಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net