

ತೆಲಸಂಗ ಗ್ರಾಮದಲ್ಲಿ ಸೆ. 14ರಂದು ಪ್ರದರ್ಶನಗೊಳ್ಳಲಿರುವ ‘ಹೊಟ್ಟೆಯಲ್ಲಿ ಹುಟ್ಟಲಿಲ್ಲ, ತೊಟ್ಟಿಲು ತೂಗಲಿಲ್ಲ’ ನಾಟಕದ ರಂಗತಾಲೀಮಿಗೆ ಶ್ರೀ ದುರ್ಗಾದೇವಿ ಮಂದಿರದಲ್ಲಿ ಪುಸ್ತಕ ಪೂಜೆ ಮಾಡುವ ಮೂಲಕ ಬುಧವಾರ ಚಾಲನೆ ನೀಡಲಾಯಿತು. ಸಿದ್ದಲಿಂಗ ಮಾದರ, ಜಗದೀಶ ಖೊಬ್ರಿ, ಗಜಾನನ ಮಾದರ, ರಾಜು ಸಾಗರ, ಶ್ರವಣ ಸೂರ್ಯವಂಶಿ, ರಾಜು ಹೊನಕಾಂಬಳೆ, ರಿಯಾಜ್ ಮುಲ್ಲಾ, ಹನುಮಂತ ಮಾದರ, ಸುನೀಲ ಮಾದರ, ಅನಿಲ ಪೋಳ, ಮಾಧು ಮಾದರ ಇತರರು ಇದ್ದರು.