ಆಯೋಗದ ಸಭೆಗಳಿಗೆ ಹಾಜರಾಗುವುದಿಲ್ಲ: ಶಿವಶಂಕರಪ್ಪ ಎಸ್. ಸಾಹುಕಾರ್

KPSC
Published on

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಸಮಿತಿ ಶಿಾರಸ್ಸು ಮಾಡಿರುವ ಅಭ್ಯರ್ಥಿಗೆ ನೇಮಕಾತಿ ಆದೇಶ ಜಾರಿ ಮಾಡುವವರೆಗೂ, ಆಯೋಗದ ಸಭೆಗಳಿಗೆ ಹಾಜರಾಗುವುದಿಲ್ಲವೆಂದು ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ತಿಳಿಸಿದ್ದಾರೆ.
ಆಯೋಗದ ಕಾರ್ಯದರ್ಶಿಯವರು, ಕೆಪಿಎಸ್‌ಸಿ ಸಮಿತಿ ಶಿಾರಸ್ಸು ಮಾಡಿರುವ ಅಭ್ಯರ್ಥಿಗೆ ಇದುವರೆಗೂ ನೇಮಕಾತಿ ಆದೇಶ ಜಾರಿ ಮಾಡದೇ ಅನವಶ್ಯಕವಾದ ಆಕ್ಷೇಪಣೆಗಳನ್ನು ಸೃಷ್ಟಿ ಮಾಡಿಕೊಂಡು ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಯನ್ನೆ ಪ್ರಶ್ನೆ ಮಾಡಿ ಆಯೋಗದ ನಿರ್ಣಯವನ್ನು ಅಗೌರವಿಸಿದ್ದಾರೆ. ಕಾರ್ಯದರ್ಶಿಯವರೇ ಆಯೋಗಕ್ಕಿಂತ ಮೇಲಿನವರು ಎಂಬಂತೆ ವರ್ತಿಸುತ್ತಿದ್ದಾರೆ. ಈ ರೀತಿಯ ವರ್ತನೆಯು ನಿಯಮ ಪ್ರಕಾರ ಸರಿಯಾದುದಲ್ಲ. ಆದ್ದರಿಂದ ಕಾರ್ಯದರ್ಶಿಯವರು ಸಮಿತಿ ಶಿಾರಸ್ಸು ಮಾಡಿರುವ ಅಭ್ಯರ್ಥಿಗೆ ನೇಮಕಾತಿ ಆದೇಶ ಜಾರಿ ಮಾಡುವವರೆಗೂ, ಆಯೋಗದ ಸಭೆಗಳಿಗೆ ನಾವು ಹಾಜರಾಗುವುದಿಲ್ಲವೆಂದು ಎಂದು ಶಿವಶಂಕರಪ್ಪ ಎಸ್. ಸಾಹುಕಾರ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net