ಪ್ರಶಸ್ತಿಗಾಗಿ ಅರ್ಜಿ ಹಾಕಿದವನಲ್ಲ: ಸಂಗೀತ ವಿದ್ವಾನ್ ಪ್ರಶಸ್ತಿ ಪರಸ್ಕೃತ ಬಸವರಾಜ ಭಜಂತ್ರಿ

mysore
Published on

ಮೈಸೂರು: ಸಂಗೀತ ಕ್ಷೇತ್ರದ ಕಲಾವಿದರಿಗೆ ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ಪುರಸ್ಕಾರವಾದ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಯನ್ನು ಶಹನಾಯಿ ವಾದಕ ಹಾವೇರಿಯ ಜಿಲ್ಲೆಯ ಪಂಡಿತ್ ಬಸವರಾಜ ಭಜಂತ್ರಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು.

ಅರಮನೆಯ ವೇದಿಕೆಯಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಲ್ಲಿ ಇವರಿಗೆ ಮೈಸೂರು ಪೇಟ ತೊಡಿಸಿ, ಪ್ರಶಸ್ತಿ ಫಲಕ, 5 ಲಕ್ಷ ರೂ. ನಗದು ಬಹುಮಾನ, ಸ್ಮರಣಿಕೆ ಮತ್ತು ಸರಸ್ವತಿ ಪ್ರತಿಮೆಯನ್ನು ನೀಡಿ ಸತ್ಕರಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಬಸವರಾಜ ಭಜಂತ್ರಿ ಅವರು, ನಾನು ಯಾವತ್ತು ಪ್ರಶಸ್ತಿಗಾಗಿ ಅರ್ಜಿ ಹಾಕಿದವನಲ್ಲ. ತತ್ವ ನಿಷ್ಠೆಯಿಂದ ಇರುವವನು. ಆಹ್ವಾನಿಸಿದರೆ ಹೋಗಿ ಶಹನಾಯಿ ನುಡಿಸಿ ಬರುತ್ತೇನೆಯಷ್ಟೇ. ಹೀಗೆ ಬದುಕಿದ ನನ್ನನ್ನು ಹುಡುಕಿ ಪ್ರಶಸ್ತಿ ಕೊಟ್ಟಿರುವುದಕ್ಕೆ ಸಂತೋಷವಾಗುತ್ತದೆ ಎಂದು ಹೇಳಿದರು.

2013ರಲ್ಲಿ ಕಿತ್ತೂರು ಉತ್ಸವದಲ್ಲಿ ಶಹನಾಯಿ ವಾದಕ ಸಂಗೀತ ಕಛೇರಿ ಕೊಟ್ಟಿದ್ದೆ. ಇದನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಮಟ್ಟ ಪ್ರಶಸ್ತಿಯನ್ನು ಕೊಡಿಸಿದ್ದರು. ಆ ಸಲ 3600 ಅರ್ಜಿಗಳೂ ಬಂದಿದ್ದರೂ ನನಗೆ ಪ್ರಶಸ್ತಿ ಸಿಕ್ಕಿತ್ತು. ಆಗಲೂ ನಾನು ಅರ್ಜಿಯನ್ನು ಹಾಕಿರಲಿಲ್ಲ. ಇದು ಉತ್ತಮ ಸಂಪ್ರದಾಯ. ರಾಜ್ಯದಲ್ಲಿರುವ ಅನೇಕ ಹಿರಿಯ ಕಲಾವಿದರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಪ್ರೋತ್ಸಾಹ ಕೊಡಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net