ಜಾತಿ ಆಧಾರಿತ ಚುನಾವಣೆಯಲ್ಲ

1 Joshi New 111
Published on

ಹುಬ್ಬಳ್ಳಿ : ಲೋಕಸಭೆ ಚುನಾವಣೆ ರಾಷ್ಟ್ರೀಯ ಆಧಾರಿತವಾಗಿದ್ದು, ದೇಶ ಹಾಗೂ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ವಿಷಯಗಳ ಮೇಲೆ ನಡೆಯುತ್ತದೆ. ಯಾವುದೇ ಜಾತಿ ಆಧಾರಿತ ಚುನಾವಣೆ ಇದಲ್ಲ ಎಂದು ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇಶಕ್ಕೆ ನರೇಂದ್ರ ಮೋದಿ ನೇತೃತ್ವ ಬೇಕೋ ಅಥವಾ ರಾಹುಲ್ ಗಾಂಧಿಯ ಇಂಡಿ ಮೈತ್ರಿಕೂಟದ ಮತ್ತು ಇತರರ ನೇತೃತ್ವ ಬೇಕೋ ಎಂಬ ವಿಷಯ ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತಿದ್ದೇವೆ. ಕೇಂದ್ರದಲ್ಲಿ ಯಾವ ಸರ್ಕಾರ ಬೇಕು ಎಂಬುದನ್ನು ಜನರೇ ತೀಮಾನ ಮಾಡುತ್ತಾರೆ ಎಂದರು.

ಧಾರವಾಡ ಲೋಕಸಭೆ ಕ್ಷೇತ್ರದಿಂದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಜೋಶಿ, ಸ್ವಾಮೀಜಿ ಅವರ ಪ್ರತಿಯೊಂದು ನಡೆಯನ್ನು ಆಶೀರ್ವಾದವೆಂದು ಭಾವಿಸುವುದಾಗಿ ಅಷ್ಟೇ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net