ಕಾವ್ಯ, ಕಥಾ ಪ್ರಶಸ್ತಿ ಪ್ರಕಟ

15 Dwd 8 1 C.N. Mukta
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಉತ್ತರ ಕರ್ನಾಟಕ ಲೇಖಕಿಯರ ಸಂಘ ಪ್ರತಿವರ್ಷ ಕೊಡುವ ಸಾಹಿತ್ಯ ಸರಸ್ವತಿ, ಶ್ರೀಮತಿ ಶಾಂತಾದೇವಿ ಕಥಾ ಹಾಗೂ ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಶ್ರೀಮತಿ ಶಾಂತಾದೇವಿ ಕಣವಿ ಕಥಾ ಪ್ರಶಸ್ತಿಗೆ ಸಿ.ಎನ್. ಮುಕ್ತಾ (2023), ಫಾತಿಮಾ ರಲಿಯಾ (2024), ಡಾ. ಲತಾ ರಾಜಶೇಖರ ಕಾವ್ಯ ಪ್ರಶಸ್ತಿಗೆ ಡಾ. ಎಚ್.ಎಲ್. ಪುಷ್ಪಾ (2023), ಸ್ಮಿತಾ ಅಮೃತರಾಜ್ (2024), ಸಾಹಿತ್ಯ ಸರಸ್ವತಿ ಪ್ರಶಸ್ತಿಗೆ ಡಾ. ವೈ.ಸಿ. ಭಾನುಮತಿ (2023), ಬಿ.ಕೆ. ಶ್ರೀಮತಿರಾವ್ (2024) ಭಾಜನರಾಗಿದ್ದಾರೆ. ಜೂನ್‌ನಲ್ಲಿ ನಡೆಯುವ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net