ಉತ್ತರ ಕರ್ನಾಟಕ ಜನರ ಗುಣ ದೊಡ್ಡದು

9GKK1
Published on

ಗೋಕಾಕ: 121 ವರ್ಷ ಸೇವೆ ಪೂರೈಸಿರುವ ದಿ.ಗೋಕಾಕ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್ ಗೋಕಾಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಮೈಸೂರು ರಾಜಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ ಹೇಳಿದರು.

ಇಲ್ಲಿನ ದಿ.ಗೋಕಾಕ ಅರ್ಬನ್ ಕೋ-ಆಪ್ ಕ್ರೆಡಿಟ್ ಬ್ಯಾಂಕ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಅಭಿಮಾನದಿಂದ ನಮ್ಮನ್ನು ಕರೆಸಿ ಸತ್ಕರಿಸುವ ಉತ್ತರ ಕರ್ನಾಟಕ ಭಾಗದ ಜನರ ಗುಣ ದೊಡ್ಡದು. ಮೈಸೂರಿನ ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ ಬ್ಯಾಂಕಿನ ಸುವರ್ಣ ಮಹೋತ್ಸವಕ್ಕೆ ಆಗಮಿಸಿದ್ದರು. ಈಗ ನನ್ನನ್ನು ಕರೆಯಿಸಿ ಸನ್ಮಾನಿಸಿದ್ದು, ಎಂದಿಗೂ ಮರೆಯದ ಘಳಿಗೆ. ಈ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು.

ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಘೋಡಗೇರಿಯ ಮಲ್ಲಯ್ಯ ಸ್ವಾಮೀಜಿ ಹಾಗೂ ಮರಡಿಮಠದ ಡಾ.ಪವಾಡೇಶ್ವರ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಬ್ಯಾಂಕ್ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟಿ,

ಉಪಾಧ್ಯಕ್ಷ ಸುಧೀರ ಅಂಕಲಿ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಜೆ.ಎಂ.ಮುನವಳ್ಳಿ, ವಿ.ಎಸ್.ಬಿದರಿ, ಡಿ.ಸಿ.ಬಿದರಿ, ಆರ್.ಸಿ.ತಾರಳಿ, ಎಂ.ಬಿ.ಕಲ್ಲೋಳ್ಳಿ, ಎಂ.ಡಿ.ಚುನಮರಿ, ಎಸ್.ಎಂ.ಕುರಬೇಟ, ಎಸ್.ವಿ.ಘೋಡಗೇರಿ, ಸಿ.ಎಂ.ಕುರಬೇಟ, ಎ.ಕೆ.ಹೆಗ್ಗಣ್ಣವರ, ಪಿ.ಎಂ.ಮಡ್ಡೆಪ್ಪಗೋಳ, ಪಿ.ಎಸ್.ಸೊಲ್ಲಾಪುರಮಠ, ಎಸ್.ಸಿ.ಪಟ್ಟಣಶೆಟ್ಟಿ, ಬಿ.ಬಿ.ಮಾಳಿ, ಸಿ.ಸಿ.ಕಡೇವಾಡಿ, ಎಸ್.ಬಿ.ಮಗದುಮ್ಮ, ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net