ಪುತ್ತರಿರ ಐನ್ ಮನೆಯಲ್ಲಿ ನೂರಾಂಡ್ ನಮ್ಮೆ

puttarira family
Published on

ಚೆಟ್ಟಳ್ಳಿ: ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಒಂದೇ ಕುಟುಂಬದ ಐದು ತಲೆಮಾರಿನ ಕುಟುಂಬದವರು ಮೂಲ್ ಐನ್ ಮನೆಯಲ್ಲಿ ಸೇರಿ ಪತ್ತಲೋದಿ ದಿನ ನೂರಾಂಡ್ ನಮ್ಮೆಯನ್ನು ಆಚರಿಸಿದ್ದು ವಿಶೇಷವಾಗಿತ್ತು.

ಕೊಡಗಿನ ಹಲವು ಐನ್ ಮನೆಗಳಿಗೆ ಶತಮಾನಗಳ ಇತಿಹಾಸವಿರುವಂತೆ ಚೆಟ್ಟಳ್ಳಿಯ ಪುತ್ತರಿರ ಕುಟುಂಬದ(ಪುದಿಯ ಮನೆ) ಐನ್ ಮನೆಗೆ ನೂರನೇ ವರ್ಷ ತುಂಬಿತ್ತು. ಅಜ್ಜ ಮುತ್ತಜರು, ತಂದೆ ತಾಯ್ಮಿಕ್ಕಳು ಮೊಮ್ಮಕ್ಕಳು ಮರಿಮಕ್ಕಳು ಸೇರಿದಂತೆ ವಿವಾಹವಾಗಿ ಕೊಟ್ಟ ಹೆಣ್ಣು ಮಕ್ಕಳ ಕುಟುಂಬ ಪತ್ತಲೋದಿ ದಿನ ಒಟ್ಟಾಗಿ ಐನ್ ಮನೆಯಲ್ಲಿ ಸೇರಿ ನೆಲ್ಲಕ್ಕಿ ನಡುಬಾಡೆಯಲ್ಲಿ ಮೀದಿ ನೀರಿಟ್ಟು ಒಳಿತು ಮಾಡಲೆಂದು ಪುತ್ತರಿರ ಕಾಶಿ ಸುಬ್ಬಯ್ಯನವರು ಬೇಡಿಕೊಂಡರು.

ನಂತರ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಕ್ರೀಡೆ ನಡೆಯಿತು. ನೂರಾಂಡ್ ನಮ್ಮೆಯ ವಿಶೇಷತೆ ಬಗ್ಗೆ ಪುತ್ತರಿರ ದೇವಿದೇವಯ್ಯ ತಿಳಿಸಿದರು. ಈ ಕುಟುಂಬದ ಮೂಲ್ಪುರುಷರಾದ ದಿ.ಪುತ್ತರಿರ ಗಣಪತಿ, ದಿ.ಪುತ್ತರಿರ ಕುಶಾಲಪ್ಪ ಹಾಗೂ ದಿ.ಪುತ್ತರಿರ ಚಿಣ್ಣಪ್ಪ, ನವರ ಜೀವನ ಸಾಧನೆಯನ್ನು ಪುತ್ತರಿರ ಗಣೇಶ್ ಭೀಮಯ್ಯ ನವರು ನೆನೆಸುತ್ತಾ ಹಿರಿಯರ ಆದರ್ಶವನ್ನು ನಾವೆಲ್ಲರು ಪಾಲಿಸುವಂತಾಗಬೇಕೆಂದರು. ವಿವಿಧ ಕ್ರೀಡೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net