ನೂರಳೇಶ್ವರಸ್ವಾಮಿ ಜಾತ್ರೆ ಸಡಗರ

ನೂರಳೇಶ್ವರಸ್ವಾಮಿ ಜಾತ್ರೆ ಸಡಗರ
Published on

ಸರಗೂರು: ತಾಲೂಕಿನ ಹುಸ್ಕೂರು ಹಾಡಿಯಲ್ಲಿ ನೂರಳೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಮತ್ತು ಕೊಂಡೋತ್ಸವ ಗುರುವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ತಾಲೂಕಿನ ಹಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಸ್ಕೂರು ಹಾಡಿಯ ನುಗು ಜಲಾಶಯದ ಹಿನ್ನೀರಿನಲ್ಲಿರುವ ನೂರಳೇಶ್ವರ ಸ್ವಾಮಿ ದೇವಸ್ಥಾನವನ್ನು ಕಣ್ಮನ ಸೆಳೆಯುವಂತೆ ಅಲಂಕರಿಸಲಾಗಿತ್ತು. ನುಗು ಜಲಾಶಯಕ್ಕೆ ದೇವರನ್ನು ಕೊಂಡೊಯ್ದು ಗಂಗಾಸ್ನಾನ ಮಾಡಿಸಿ ನಂತರ ದೇವಸ್ಥಾನದ ಬಳಿಗೆ ಮಂಗಳವಾದ್ಯದ ಮೂಲಕ ತರಲಾಯಿತು. ಹರಕೆ ಹೊತ್ತ ಭಕ್ತರು ಬಾಯಿಗೆ ಬೀಗ ಸೇವೆ ಸಲ್ಲಿಸಿದರು. ದೇವಸ್ಥಾನದ ಸುತ್ತ ದೇವರ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ವಿವಿಧ ಕಲಾತಂಡಗಳು ಹಾಗೂ ಮಂಗಳವಾದ್ಯ ಮೆರವಣಿಗೆಗೆ ಮೆರುಗು ತುಂಬಿತು.

ಮೆರವಣಿಗೆಯುದ್ದಕ್ಕೂ ಭಕ್ತರು ದೇವರಿಗೆ ನಮಿಸಿ ಕತ್ತಿ ಹಿಡಿದು ಭಕ್ತಿಭಾವ ಮೆರೆದರು. ದೇವಸ್ಥಾನದ ಮುಂಭಾಗದಲ್ಲಿ ಹಾಕಲಾಗಿದ್ದ ಕೊಂಡಕ್ಕೆ ವಿಶೇಷ ಪೂಜೆ ಸಲ್ಲಿಸಿ ಕೊಂಡೋತ್ಸವ ನಡೆಸಲಾಯಿತು. ಬಳಿಕ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹೊಸ ಬಿರ್ವಾಳ್, ಹೊಸ ಹೆಗ್ಗುಡಿಲು, ಹುಸ್ಕೂರು ಹಾಡಿ, ದಡದಹಳ್ಳಿ, ಬೇದ್ದಲಪುರ, ಹಳಿಯೂರು, ಹಳೆ ಹೇಗ್ಗುಡಿಲು ಸೇರಿದಂತೆ ವಿವಿಧ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net