

ಉಳ್ಳಾಲ: ಸಂಘಟನೆಗಳ ಸದಸ್ಯರಲ್ಲಿ ಒಗ್ಗಟ್ಟಿದ್ದರೆ ಯಾರಿಂದಲೂ ವಿಭಜಿಸಲು ಅಸಾಧ್ಯ. ಅಲ್ಲದೆ ಒಗ್ಗಟ್ಟಿನಿಂದ ನಡೆಸುವ ಯಾವುದೇ ಕಾರ್ಯ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಸಯ್ಯದ್ ಶರಪುದ್ದಿನ್ ತಂಙಳ್ ಅಭಿಪ್ರಾಯಪಟ್ಟರು.
ಮಲಾರ್ ಯಾದ್ ಫೌಂಡೇಷನ್ ವತಿಯಿಂದ ಪಾವೂರು ಗ್ರಾಮದ ಮಲಾರ್ ಜಂಕ್ಷನ್‌ನಲ್ಲಿ ಸೋಮವಾರ ‘ನೂರೇ ಅಜ್ಮೀರ್’ ಆಧ್ಯಾತ್ಮಿಕ ಸಂಗಮ ಉದ್ಘಾಟಿಸಿ ಮಾತನಾಡಿದರು.
ಯಾದ್ ಫೌಂಡೇಷನ್ ಅಧ್ಯಕ್ಷ ಅಬ್ದುಲ್ ನಿಸಾರ್ ಮಲಾರ್ ಅಧ್ಯಕ್ಷತೆ ವಹಿಸಿದ್ದರು. ಸಯ್ಯದ್ ಅಮೀರ್ ತಂಙಳ್ ಕಿನ್ಯ ದುವಾ ನೆರವೇರಿಸಿದರು. ವಲಿಯುದ್ದೀನ್ ಪೈಝಿ ಉಸ್ತಾದ್ ವಾಝಿಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ನಡೆಯಿತು.
ಸಯ್ಯದ್ ಇಜಾಝ್ ಹುಸೈನ್ ಜಿಸ್ತಿ ಅಜ್ಮಿರ್, ಉದ್ಯಮಿಗಳಾದ ಹಮೀದ್ ಕಣ್ಣೂರು, ಫಾರೂಕ್ ಸಿ.ಎಂ., ಗುತ್ತಿಗೆದಾರ ಬಶೀರ್ ಜೋಕಟ್ಟೆ, ಗ್ರಾಪಂ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ, ಪತ್ರಕರ್ತರಾದ ಹಂಝ ಮಲಾರ್, ಅನ್ಸಾರ್ ಇನೋಳಿ, ಮೇಲಂಗಡಿ ಹೊಸಪಳ್ಳಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಯಾದ್ ಫೌಂಡೇಷನ್ ಪ್ರಧಾನ ಸಂಚಾಲಕ ರಿಯಾಝ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ರಿಯಾಝ್ ಎನ್., ವಿವಿಧ ಮಸೀದಿಯ ಅಧ್ಯಕ್ಷರು ಉಪಸ್ಥಿತರಿದ್ದರು.
ಯಾದ್ ಫೌಂಡೇಷನ್ ಗೌರವಾಧ್ಯಕ್ಷ ಹಾಮದ್ ಅಲ್ತಾಫ್ ಸ್ವಾಗತಿಸಿದರು. ತಾಪಂ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು ಮಲಾರ್ ಪ್ರಸ್ತಾವನೆಗೈದರು.
ತಾಂತ್ರಿಕತೆ ಬೆಳೆಯುತ್ತಿದ್ದು ಅದಕ್ಕೆ ತಕ್ಕಂತೆ ಮಕ್ಕಳನ್ನು ಬೆಳೆಸುವ ಕಾರ್ಯ ನಡೆಯಬೇಕಿದೆ. ಆಧುನಿಕತೆಯಲ್ಲಿ ಕಂಪ್ಯೂಟರ್ ಕೆಲಸ ಮಾಡಿದರೂ ಅದನ್ನು ನಿರ್ವಹಿಸಲು ತಂತ್ರಜ್ಞರ ಅವಕಾಶ ಇದ್ದು ಇದನ್ನರಿತು ಮುಂದುವರಿದರೆ ಅತ್ಯಂತ ಗ್ರಾಮೀಣ ಭಾಗದ ಮಕ್ಕಳಿಗೂ ದೊಡ್ಡ ಮಟ್ಟದ ಸಾಧನೆ ಮಾಡುವ ಅವಕಾಶವಿದೆ. ಯು.ಟಿ.ಝುಲ್ಫಿಕರ್ ಫರೀದ್, ಅಧ್ಯಕ್ಷ, ನೈಶ್ ಕಾಲೇಜು, ಬೆಂಗಳೂರು https://www.vijayavani.net/installation-of-shree-rakteshwari-peetha https://www.vijayavani.net/reception-committee-meeting-at-kondevur-ashram