

ಹುಬ್ಬಳ್ಳಿ: ತಾಲೂಕಿನ ನೂಲ್ವಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಮುತ್ತನಗೌಡ ರು. ಪಾಟೀಲ, ಉಪಾಧ್ಯಕ್ಷರಾಗಿ ಗದಿಗೆಪ್ಪ ಶಿ. ಜಿಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಚುನಾವಣೆ ಪ್ರಕ್ರಿಯೆ ನಡೆಯಿತು. ನಿರ್ದೇಶಕರಾಗಿ ಬಸನಗೌಡ ಸಿದ್ದನಗೌಡ್ರ, ಈರನಗೌಡ ಮೂಗಣ್ಣವರ, ಗುರನಗೌಡ ಧರ್ಮಗೌಡ್ರ, ದ್ಯಾಮನಗೌಡ ಬಾಳಪ್ಪಗೌಡ್ರ, ಈರಮ್ಮ ಹುತ್ತನಗೌಡ್ರ, ರುದ್ರವ್ವ ಗಣಾಚಾರಿ, ಬಾಬುರಾವ ಮೊಖಾಶಿ, ಗುರುಶಿದ್ದಪ್ಪ ಕೊಪ್ಪದ, ಶಂಕ್ರಪ್ಪ ಭಂಗಿ, ಗುರುನಾಥಗೌಡ ಧರ್ಮಗೌಡ್ರ ಅವರನ್ನು ಆಯ್ಕೆ ಮಾಡಲಾಯಿತು.
ಚುನಾವಣಾಧಿಕಾರಿಯಾಗಿ ಎ.ಎಂ. ಮುಶಾಪುರಿ ಅವರು ಕಾರ್ಯನಿರ್ವಹಿಸಿದರು ಎಂದು ಸಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಲ್ಲನಗೌಡ ಮೂಗಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.