ಅಹಿಂಸಾ ತತ್ತ್ವ ರೂಢಿಸಿಕೊಳ್ಳಿ

18SANKESHWAR-Web
ನಿಡಸೋಸಿ ಗ್ರಾಮದ ಗೊಲ್ಲಮಡ್ಡಿ ಶಾಲೆಯಲ್ಲಿ 1008 ಆಚಾರ್ಯ ಶ್ರೀ ಪ್ರಜಾಸಾಗರ ಮುನಿ ಮಹಾರಾಜರು ಗುರುವಾರ ಭಕ್ತರಿಗೆ ಆಶೀರ್ವದಿಸಿದರು.
Published on

ಸಂಕೇಶ್ವರ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕಾದರೆ ಪ್ರತಿಯೊಬ್ಬರೂ ಅಂಹಿಸಾ ತತ್ತ್ವ ರೂಢಿಸಿಕೊಳ್ಳಬೇಕು ಎಂದು 1008 ಆಚಾರ್ಯ ಶ್ರೀ ಪ್ರಜಾಸಾಗರ ಮುನಿ ಮಹಾರಾಜರು ಸಲಹೆ ನೀಡಿದ್ದಾರೆ. ಸಮೀಪದ ನಿಡಸೋಸಿ ಗ್ರಾಮದ ಗೊಲ್ಲಮಡ್ಡಿ ಶಾಲೆಯಲ್ಲಿ ಗುರುವಾರ ಭಕ್ತರಿಗೆ ಆಶೀರ್ವದಿಸಿ ಮಾತನಾಡಿದ ಅವರು, ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಒಳ್ಳೇಯ ಮನಸ್ಸುಗಳು ಒಗ್ಗೂಡುವುದು ಮುಖ್ಯವಾಗುತ್ತದೆ. ಪ್ರತಿಯೊಬ್ಬರೂ ಸ್ವಾರ್ಥ ಬದಿಗೊತ್ತಿ ಇನ್ನೊಬ್ಬರ ಒಳಿತು ಬಯಸಬೇಕು ಎಂದರು. ಜೈನ ಸಮುದಾಯ ಹಿರಿಯ ಮುಖಂಡ ಮಹಾವೀರ ಖಾನಾಪುರೆ ಮಾತನಾಡಿದರು. ಮಹಾರಾಜರು ಭೋಜದಿಂದ ಯರನಾಳ ಗ್ರಾಮಕ್ಕೆ ತೆರಳುವ ಸಂದರ್ಭ ನಿಡಸೋಸಿಯ ಸರಕಾರಿ ಶಾಲೆಯಲ್ಲಿ ತಂಗಿದ್ದರು. ಇಂದುಮತಿ ಖಾನಾಪೂರೆ, ಬಾಬಾಸಾಹೇಬ ಖಾನಾಪೂರೆ, ದರ್ಶನ ಖಾನಾಪೂರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net