ಪಕ್ಷೇತರ ಅಭ್ಯರ್ಥಿಯಾಗಿ ಗುಂಗಾಡಿ ಸ್ಪರ್ಧೆ

Saranappa gungadi
ಪಕ್ಷೇತರ ಅಭ್ಯರ್ಥಿ ಶರಣಪ್ಪ ಗುಂಗಾಡಿ.
Published on

ಕುಕನೂರು: ಬಿಜೆಪಿಯ ಪ್ರಬಲ ಅಭ್ಯರ್ಥಿಯಾಗಿ ಟಿಕೆಟ್‌ಗಾಗಿ ಕಾದಿದ್ದೆ. ಆದರೆ ಟಿಕೆಟ್ ನೀಡಲಿಲ್ಲ. ಇದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಶರಣಪ್ಪ ಗುಂಗಾಡಿ ಹೇಳಿದರು.

ನಾನು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ನಾಲ್ಕು ಜನರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ನವೀನ್ ಗುಳಗಣ್ಣನವರ, ಬಸವಲಿಂಗಪ್ಪ ಭೂತೆ, ಕಳಕನಗೌಡ ಕಲ್ಲೂರು ಹಾಗೂ ನಾನು ಆದರೆ, ಪಕ್ಷ ಮತ್ತೆ ಪ್ರಬಲ ಸಮುದಾಯವನ್ನು ತಿರಸ್ಕರಿಸಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

ನಾಲ್ವರಲ್ಲಿ ಒಬ್ಬರಿಗೆ ಟಿಕೆಟ್ ನೀಡಿದ್ದರೂ ಬಿಜೆಪಿಯದಲ್ಲಿದ್ದು ಕೆಲಸ ಮಾಡುತ್ತಿದ್ದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರಲಿಲ್ಲ. ಆದರೆ, ಮತ್ತೆ ಸಚಿವ ಹಾಲಪ್ಪ ಆಚಾರ್‌ಗೆ ಟಿಕೆಟ್ ನೀಡಿದ್ದು, ಈ ಬಾರಿ ಅವರು ಮೂರರಿಂದ ನಾಲ್ಕನೇ ಸ್ಥಾನಕ್ಕೆ ಹೋಗುತ್ತಾರೆ. ಇವರ ದುರಾಡಳಿತವನ್ನು ಜನರು ನೋಡಿದ್ದಾರೆ

ಹಾಲಪ್ಪ ಆಚಾರ್‌ ಹಣ ನೀಡಿ ಟಿಕೆಟ್ ಪಡೆದುಕೊಂಡಿದ್ದಾರೆ

ಯಲಬುರ್ಗಾ ಪಿಎಲ್‌ಡಿ ಬ್ಯಾಂಕ್ ಮುಚ್ಚಿ ಹೋಗಿದ್ದು, ಕುಕನೂರು ಪಟ್ಟಣದಲ್ಲಿ ಪಿಎಲ್‌ಡಿ ಬ್ಯಾಂಕ್ ಆರಂಭವಾಗಲಿಲ್ಲ. ಇನ್ನೂ ಶೇ.42 ಕೂಡ ಅನುದಾನ ಬಳಕೆಯಾಗಿಲ್ಲ. ಬಳಕೆಯಾದ ಅನುದಾನದ ಕಾಮಗಾರಿ ಅಪೂರ್ಣಗೊಂಡಿವೆ. ರೈತರಿಗೆ ನೀರಾವರಿ ಯೋಜನೆ ತರಲಾಗಿದೆ ಎಂದು ಹೇಳುತ್ತಿದ್ದು, ಕುಡಿವ ನೀರಿನ ಪೈಪ್‌ಲೈನ್ ಮೂಲಕ ಕೆರೆ ತುಂಬಿಸಿದ್ದಾರೆ. ಇದು ರೈತರ ಜಮೀನಿಗೆ ನೀರಾವರಿಯಾಗುವುದಿಲ್ಲ. ಹಣ ನೀಡಿ ಟಿಕೆಟ್ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: https://www.vijayavani.net/entry-of-private-doctors-for-assembly-elections-medical-association-claims-for-tickets/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net