ಜಿಲ್ಲಾ ಸಮಸ್ಯೆ ವಿರುದ್ಧ ಪಕ್ಷಾತೀತವಾಗಿ ಹೋರಾಟ

Published on

ಬಳ್ಳಾರಿ ; ಜಿಲ್ಲೆಯ ಯಾವುದೇ ಸಮಸ್ಯೆಯನ್ನು ಪಕ್ಷಾತೀತ ಹಾಗೂ ಜಾತ್ಯಾತೀತ ವಾಗಿ ಹೋರಾಟ ಮಾಡಿದಾಗ ಯಶಸ್ಸು ಖಂಡಿತವಾಗಿ ಸಿಗಲಿದೆ ಎಂದು ಸಾಮಾಜಿಕ ಹೋರಾಟಗಾರ ಸಿರಿಗೇರಿ ಪನ್ನಾರಾಜ್ ಹೇಳಿದರು.

ನಗರದ ಬಿಡಿಎಎ ಸಭಾಂಗಣದಲ್ಲಿ ರೈತರ ಹಾಲು ಉತ್ಪಾದಕರ ಹೋರಾಟ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ರಿಟೀಷರ ಕಾಲದಲ್ಲಿ 18 ತಾಲೂಕುಗಳು ಇದ್ದ ಜಿಲ್ಲೆಯಲ್ಲಿ ಇಂದು ಕೇವಲ ಐದು ತಾಲೂಕು, ಐದು ಶಾಸಕರಿರುವ ಜಿಲ್ಲೆಯಾಗಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ, ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ ಸೇರಿ ಕಾಮಗಾರಿ ಪೂರ್ಣಗೊಂಡರೂ ಗಡಿಯಾರ ಗೋಪುರ ಉದ್ಘಾಟನೆಯಾಗುತ್ತಿಲ್ಲ. ಹೀಗೆ ಜಿಲ್ಲೆಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.

ರಾಬಕೊವಿ ಒಕ್ಕೂಟದ ಮಾಜಿ ನಿರ್ದೇಶಕ ವೀರಶೇಖರರೆಡ್ಡಿ ಮಾತನಾಡಿ, ವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ಪರಿಣಾಮ ಸೊಸೈಟಿಗಳ ಸಂಖ್ಯೆಯೂ ಕಡಿತವಾಗಿದೆ. ಹಿಂದೆ 17೦ಕ್ಕೂ ಹೆಚ್ಚು ಇದ್ದ ಸೊಸೈಟಿಗಳ ಸಂಖ್ಯೆ ಇಂದು ಕೇವಲ 30-40ಕ್ಕೆ ಇಳಿಕೆಯಾಗಿದೆ. ಹಾಗಾಗಿ ಹಾಲು ಉತ್ಪಾದನೆ ಮಾಡಿ ಸೊಸೈಟಿಗಳ ಸಂಖ್ಯೆ ಜಾಸ್ತಿ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net