ನಾನ್​ ಇನ್ವ್​ಸಿವ್​ ವೆಂಟಿಲೇಷನ್​ ಕಾರ್ಯಾಗಾರ

27 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಎಸ್​ಡಿಎಂ ವೈದ್ಯಕಿಯ ಕಾಲೇಜಿನ ತುರ್ತು ಚಿಕಿತ್ಸಾ ವಿಭಾಗದಿಂದ ಆಮ್ಲಜನಕ ವಿತರಣಾ ಸಾಧನಗಳು ವಿಷಯದೊಂದಿಗೆ ನಾನ್​ ಇನ್ವ್​ಸಿವ್​ ವೆಂಟಿಲೇಷನ್​ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿತ್ತು.

ಎಸ್​ಡಿಎಂ ವೈದ್ಯಕಿಯ ಕಾಲೇಜಿನ ಶ್ವಾಸಕೋಶ ವಿಭಾಗದ ಮುಖ್ಯಸ್ಥ ಡಾ. ಸಂಜಯ್​, ಹುಬ್ಬಳ್ಳಿಯ ಕರ್ನಾಟಕ ವೈದ್ಯಕಿಯ ವಿಜ್ಞಾನ ಸಂಸ್ಥೆ ಅರವಳಿಕೆ ವಿಭಾಗದ ಮುಖ್ಯಸ್ಥೆ ಡಾ. ಮಾಧುರಿ, ಕೆಎಲ್​ಇಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಕುಲಕರ್ಣಿ, ಹುಬ್ಬಳ್ಳಿ ಜೆಜಿಎಂಎಂ ವೈದ್ಯಕಿಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಕಾಂತ್​ ಹಿರೇಮಠ, ಡಾ. ಉದಯಕುಮಾರ ಜೆ ಖಾಸಗೆ, ಡಾ. ಗುರುಪ್ರಸಾದ್​ ಆಂಟಿನ್​ ವಿಶೇಷ ಉಪನ್ಯಾಸ ನೀಡಿದರು.

ಉತ್ತರ ಕರ್ನಾಟಕದ ವೈದ್ಯಕಿಯ ಕಾಲೇಜುಗಳಿಂದ 70ಕ್ಕೂ ಹೆಚ್ಚು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net