

ಗುಳೇದಗುಡ್ಡ: ಸಾರಾಯಿ ಚಟದಿಂದ ನಾವು ಮುಕ್ತಗೊಂಡರೆ ಸಮಾಜ ನಮ್ಮನ್ನು ಗೌರವಿಸುತ್ತದೆ. ಸುಂದರ, ನೆಮ್ಮದಿಯ ಬದುಕಿಗೆ ಪ್ರತಿಯೊಬ್ಬರೂ ಸಾರಾಯಿಯನ್ನು ತ್ಯಜಿಸುವುದು ಮತ್ತು ಆದರ್ಶ ಬದುಕು ರೂಪಿಸಿಕೊಳ್ಳುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಬಸವೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಜಯ ಬರಗುಂಡಿ ಹೇಳಿದರು.
ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸಂಯುಕ್ತವಾಗಿ ಹಮ್ಮಿಕೊಂಡ ಮಧ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸಾರಾಯಿ ನಮ್ಮ ಬದುಕು ಹಾಗೂ ಸಂಸಾರವನ್ನು ಹಾಳು ಮಾಡುತ್ತದೆ. ಕೊನೆಗೆ ಸಮಾಜದಲ್ಲೂ ಕೂಡ ನಾವು ತಿರಸ್ಕರಿಸಲ್ಪಡುತ್ತೇವೆ. ಹಾಗಾಗಿ ಪ್ರತಿಯೊಬ್ಬರೂ ಸಾರಾಯಿ ಎಂಬ ವಿಷದ ಚಟದಿಂದ ದೂರವಿದ್ದು ಹೆಂಡತಿ, ಮಕ್ಕಳೊಂದಿಗೆ ಉತ್ತಮ ಜೀವನ ನಡೆಸಬೇಕು. ಅಂದಾಗ ಮಾತ್ರ ಮದ್ಯವರ್ಜನ ಶಿಬಿರ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮುರುಘಾಮಠದ ಕಾಶಿನಾಥ ಸ್ವಾಮೀಜಿ, ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ದುಶ್ಚಟಗಳಿಂದ ವ್ಯಕ್ತಿಯ ಬದುಕು ಸರ್ವನಾಶವಾಗುತ್ತದೆ. ನಿಮ್ಮ ಕುಡಿತದ ಕೆಟ್ಟ ಚಟದಿಂದ ಹೆಂಡತಿ, ಮಕ್ಕಳ ಜೀವನ ಕೂಡ ಹಾಳಾಗುತ್ತದೆ. ಪ್ರತಿಯೊಬ್ಬರೂ ಮದ್ಯ ವ್ಯಸನದಿಂದ ಮುಕ್ತಗೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲರೊಂದಿಗೆ ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಹೇಳಿದರು.
ಶಿಬಿರಾರ್ಥಿಗಳಿಗೆ ಮರು ಮದುವೆ ಎಂಬ ವಿನೂತನ ಕಾರ್ಯಕ್ರಮ ನಡೆಯಿತು. ಶಿಬಿರಾರ್ಥಿಗಳಿಗೆ ಅವರ ಪತ್ನಿಯರು ಪಾದ ತೊಳೆದು ಪೂಜೆ ಮಾಡಿದರು.
ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ನಾಗೇಶ ವೈ. ಸದಸ್ಯ ಹೇಮಂತ ದೊಡ್ಡಮನಿ, ಮುಖಂಡ ಗೋಪಾಲ ಭಟ್ಟಡ, ಶಿಬಿರ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಪಿ. ಎನ್. ಪವಾರ, ಶಿಬಿರದ ಪ್ರಧಾನ ಸಂಚಾಲಕ ಮಲ್ಲಿಕಾರ್ಜುನ ರಾಜನಾಳ, ಸದಸ್ಯರಾದ ಅಶೋಕ ನಾಯನೆಗಲಿ, ಮೋಹನ ಕರನಂದಿ, ರಾಚಣ್ಣ ಕೆರೂರ, ಸುರೇಶ ವಗ್ಗಾ, ಸಚಿನ ತೊಗರಿ, ನಾಗೇಶಪ್ಪ ಪಾಗಿ, ಸಂಗಪ್ಪ ಜವಳಿ, ಚಂದ್ರಶೇಖರ ಮುರುಡಿ, ಶಿಬಿರಾಧಿಕಾರಿ ದಿನೇಶ ಮರಾಠೆ, ಆರೋಗ್ಯ ಸಹಾಯಕಿ ರಂಜಿತಾ, ಅನಿಲ ಚಪ್ಪರಗಾವಿ, ಸಂಸ್ಥೆ ಮೇಲ್ವಿಚಾರಕರಾದ ಸಂಜೀವಕುಮಾರ, ಮಲ್ಲಿಕಾರ್ಜುನ ನಾಗಶೆಟ್ಟಿ ಮತ್ತು ಎಲ್ಲ ಸೇವಾ ಪ್ರತಿನಿಧಿಗಳು ಇದ್ದರ.