ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯ

c v chandrasherkar namination
ಕೊಪ್ಪಳದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ವಿ.ಚಂದ್ರಶೇಖರ್ ಗುರುವಾರ ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್ ಶೋ ನಡೆಸಿದರು. ಲಕ್ಷ್ಮೀ ಚಂದ್ರಶೇಖರ್, ಸುರೇಶ ಭೂಮರಡ್ಡಿ, ಶಿವಕುಮಾರ್ ಹಕ್ಕಾಪಕ್ಕಿ ಇದ್ದರು.
Published on

ಕೊಪ್ಪಳ: ಬಿಜೆಪಿ ವಿರುದ್ಧ ಬಂಡಾಯ ಸಾರಿ, ಜೆಡಿಎಸ್ ಸೇರಿರುವ ಸಿ.ವಿ.ಚಂದ್ರಶೇಖರ್ ಅಪಾರ ಕಾರ್ಯಕರ್ತರೊಂದಿಗೆ ಭರ್ಜರಿ ರೋಡ್ ಶೋ ನಡೆಸಿ ಶಕ್ತಿಪ್ರದರ್ಶನದೊಂದಿಗೆ ಕೊನೇ ದಿನವಾದ ಗುರುವಾರ ನಾಮಪತ್ರ ಸಲ್ಲಿಸಿದರು.

ಕಾರ್ಯಕರ್ತರು ಹೂವಿನಿಂದ ಪುಷ್ಪಾರ್ಚನೆ

ಬೆಳಗ್ಗೆ ಗವಿಮಠಕ್ಕೆ ಕುಟುಂಬ ಸಮೇತ ತೆರಳಿ ಗವಿಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಗವಿಶ್ರೀಗಳನ್ನು ಕಂಡು ಕಣ್ಣೀರು ಹಾಕಿದರು. ಬೆನ್ನು ತಟ್ಟಿದ ಶೀಗಳು ಸಂತೈಸಿದರು. ಬಳಿಕ ಮಠದ ಮುಂಭಾಗದಿಂದ ಆರಂಭವಾದ ರ‌್ಯಾಲಿ ಗಡಿಯಾರ ಕಂಬ ವೃತ್ತ, ಜವಾಹರ ರಸ್ತೆ, ಅಶೋಕ ವೃತ್ತವರೆಗೆ ಸಾಗಿಬಂತು. ದಾರಿಯುದ್ದಕ್ಕೂ ಕಾರ್ಯಕರ್ತರು ಹೂವಿನಿಂದ ಪುಷ್ಪಾರ್ಚನೆ ಮಾಡಿದರು. ಹಗಲು ವೇಷಧಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು.

ಭತ್ತದ ಹೊರೆ ಹೊತ್ತ ಮಹಿಳೆಯರು ಭಾಗವಹಿಸಿದ್ದು ಕಂಡುಬಂತು. ಮಧ್ಯಾಹ್ನದ ಬಳಿಕ ಚುನಾವಣಾಧಿಕಾರಿ ಕಚೇರಿಗೆ ತೆರಳಿದ ಸಿವಿಸಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ತಾಲೂಕು ಅಧ್ಯಕ್ಷ ಚನ್ನಪ್ಪ ಅಳವಂಡಿ, ಪ್ರಮುಖರಾದ ಅಪ್ಸರಸಾಬ್ ಅತ್ತಾರ, ಸಾದಿಕ್ ಅತ್ತಾರ, ಸುರೇಶ ಭೂಮರಡ್ಡಿ, ಲಕ್ಷ್ಮೀ ಚಂದ್ರಶೇಖರ್, ಬಸವರಾಜ, ಡಾ.ಮಹೇಶ ಗೋವನಕೊಪ, ಸಂಗಪ್ಪ ವಕ್ಕಳದ, ಶಿವಕುಮಾರ್ ಹಕ್ಕಾಪಕ್ಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net