ಉಪಚುನಾವಣೆಗೆ 3 ನಾಮಪತ್ರ ಸಲ್ಲಿಕೆ

Published on

ಸಿಂಧನೂರು: ಸ್ಥಳೀಯ ನಗರಸಭೆಯ 6ನೇ ವಾರ್ಡ್ ನಗರಸಭೆ ಸದಸ್ಯ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಗೆ ಸೋಮವಾರ ಮೂರು ನಾಮಪತ್ರ ಸಲ್ಲಿಕೆಯಾದವು.

ಹಿಂದುಳಿದ ವರ್ಗ (ಅ) ಮಹಿಳೆಗೆ ಮೀಸಲಾಗಿರುವ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಉಮೇರಾ ತಬ್ಸುಮ್ ಅಮ್ಜದ್ ಖಾನ್, ಬಿಜೆಪಿಯಿಂದ ಕಾವೇರಿ ಅಮರೇಶ, ಪಕ್ಷೇತರರಾಗಿ ಸಾಜೀದಾ ಬೇಗಂ ಮಹಿಮೂದ್‌ಖಾನ್ ನಾಮಪತ್ರ ಸಲ್ಲಿಸಿದರು.

ನ.12ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ. ನ.14ರವರೆಗೆ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅವಕಾಶವಿದೆ. ನ.23 ರಂದು ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿ ವೀರೇಶ ಗೋನವಾರ ಹೇಳಿದರು. ಸಹಾಯಕ ಚುನಾವಣಾಧಿಕಾರಿ ರಾಮದಾಸ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net