ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ

16-04-Shiva-3
ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಎಸ್‌ಯುಸಿಐ ಅಭ್ಯರ್ಥಿಯಾಗಿ ರಾಮಲಿಂಗಪ್ಪ ಚುನಾವಣಾಕಾರಿ ಚಂದ್ರಶೇಖರ ನಾಯಕಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು. ಪಕ್ಷದ ಪದಾಕಾರಿಗಳಾದ ಡಾ.ಚಂದ್ರಗಿರೀಶ, ಕೆ.ಸೋಮಶೇಖರ, ಎನ್.ಎಸ್.ವೀರೇಶ ಇದ್ದರು
Published on

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಮಂಗಳವಾರ ಇಬ್ಬರು ನಾಮಪತ್ರ ಸಲ್ಲಿಸಿದ್ದು, ಇದರೊಂದಿಗೆ ಇದುವರೆಗೆ ಒಟ್ಟು ಐದು ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.
ನಗರದ ಸೂಪರ್ ಮಾರ್ಕೆಟ್‌ನಿಂದ ಮೆರವಣಿಗೆ ಮೂಲಕ ಆಗಮಿಸಿ ಎಸ್‌ಯುಸಿಐ ಅಭ್ಯರ್ಥಿ ರಾಮಲಿಂಗಪ್ಪ ಚುನಾವಣಾಕಾರಿ ಚಂದ್ರಶೇಖರ ನಾಯಕಗೆ ನಾಮಪತ್ರ ಸಲ್ಲಿಸಿದರು. ಕೆಆರ್‌ಎಸ್‌ನಿಂದ ಬಸವಪ್ರಭು ನಾಮಪತ್ರ ಸಲ್ಲಿಕೆ ಮಾಡಿದರು.
ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್ ಅಕಾರಿ ಸಾಹಿತ್ಯ ಆಲದಕಟ್ಟೆ, ಅಪರ ಜಿಲ್ಲಾಕಾರಿ ಅಶೋಕ ದುಡಗುಂಡಿ ಉಪಸ್ಥಿತರಿದ್ದರು. ಎಸ್‌ಯುಸಿಐ ಅಭ್ಯರ್ಥಿ ರಾಮಲಿಂಗಪ್ಪ 30 ಸಾವಿರ ರೂ. ವೌಲ್ಯದ ದ್ವಿಚಕ್ರ ವಾಹನ ಹೊರತು ಪಡಿಸಿದರೆ ಯಾವುದೇ ಚರ ಮತ್ತು ಸ್ಥಿರಾಸ್ತಿ ಹೊಂದಿಲ್ಲ. ಕೆಆರ್‌ಎಸ್ ಅಭ್ಯರ್ಥಿ ಬಸವಪ್ರಭು 98 ಸಾವಿರ ರೂ. ವೌಲ್ಯದ ಚರಾಸ್ತಿಯನ್ನು ಮಾತ್ರ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net