ತಿ.ನರಸೀಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವ್ಯವಸ್ಥಾಪನ ಮಂಡಳಿಗೆ(ಸಿಂಡಿಕೇಟ್) ನೂತನ ಸದಸ್ಯರಾಗಿ ತಾಲೂಕಿನ ಸೋಸಲೆ ಗ್ರಾಮದ ಡಾ.ಮಹೇಶ್ ಸೋಸಲೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಸಿ.ಶಶಿಕಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.