ಪಕ್ಷೇತರ ಅಭ್ಯರ್ಥಿಯಾಗಿ ಜಿ.ಜಿ.ಹೇಮಂತ್ ಕುಮಾರ್ ನಾಮಪತ್ರ

17Adarshkdga6
Published on

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಗರಗಂದೂರು ಗ್ರಾಮದ ಜಿ.ಜಿ.ಹೇಮಂತ್ ಕುಮಾರ್‌ರವರು ಚುನಾವಣಾ ಅಧಿಕಾರಿ ಯತೀಶ್ ಉಳ್ಳಾಲ್‌ರವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.


ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೨೦ ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ ದುಡಿದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ೧೦ ಸೀಟ್ ಗೆಲ್ಲಿಸಿದ್ದೇನೆ. ವರಿಷ್ಟರೊಂದಿಗೆ ಸ್ಪರ್ಧೆ ಮಾಡಲು ಟಿಕಿಟ್ ಕೇಳಿಕೊಂಡಾಗ ಯಾವುದೇ ಕಾರಣಕ್ಕೂ ಕೊಡಲು ಬರಲುವುದಿಲ್ಲ ಎಂದು ಹೇಳಿದ್ದರು. ಇದರಿಂದ ಕಾರ್ಯಕರ್ತರಿಗೆ ನೋವಾಗಿತ್ತು. ಬೆಂಬಲಿಗರ ಒತ್ತಾಯದ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧಸಿದ್ದು, ನಾಮಪತ್ರ ಸಲ್ಲಿಸಿದ್ದೇನೆ ಎಂದರು.


ಎಲ್ಲ ಕಾರ್ಯಕರ್ತರನ್ನು ಬೇಟಿ ಮಾಡಿದ್ದೇವೆ. ಆದರೆ, ಮನೆಮನೆ ಭೇಟಿ ಮಾಡಲು ಸಾಧ್ಯವಾಗಿಲ್ಲ. ಮತದಾರರ ಅಭಿಪ್ರಾಯ ಕೂಡ ನಮ್ಮಪರವಾಗಿದೆ ಎಂದರು.


ಈ ಸಂದರ್ಭದಲ್ಲಿ ಜಿ.ಜಿ.ಹೇಮಂತ್ ಕುಮಾರ್‌ರವರ ಪತ್ನಿ, ಯಾಕೂಬ್, ಪ್ರದೀಪ್, ಮಂಜುನಾಥ್ ಉಪಸ್ಥಿರಿದ್ದರು.


ಸೋಮಪ್ಪ, ರಶೀದಾ ಬೇಗಂ ನಾಮಪತ್ರ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಅಭ್ಯರ್ಥಿ ಎಚ್.ಎಂ.ಸೋಮಪ್ಪರವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾ ಅಧಿಕಾರಿ ಯತೀಶ್ ಉಳ್ಳಾಲ್‌ರವರಿಗೆ ಸೋಮವಾರ ನಾಮಪತ್ರ ಸಲ್ಲಿಸಿದರು. ನಗರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಮೆರವಣಿಗೆ ಸಾಗಿ ನಾಮಪತ್ರ ಸಲ್ಲಿಸಿದರು.


ಮತ್ತೋರ್ವ ಅಭ್ಯರ್ಥಿ ಕೆ.ಪಿ.ರಶೀದ ಬೇಗಂ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಚುನಾವಣಾ ಅಧಿಕಾರಿ ಯತೀಶ್ ಉಳ್ಳಾಲ್‌ರವರಿಗೆ ಸೋಮವಾರ ನಾಮಪತ್ರ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net