ನಂಜನಗೂಡು ನಗರಸಭೆಗೆ ಐವರು ಸದಸ್ಯರ ನಾಮನಿರ್ದೇಶನ

Published on

ನಂಜನಗೂಡು: ಇಲ್ಲಿನ ನಗರಸಭೆಯ ನಾಮನಿರ್ದೇಶನ ಸದಸ್ಯರನ್ನಾಗಿ ಮಡಿವಾಳ ಕೆ.ಎಂ.ಬಸವರಾಜು, ರಮೇಶ್, ಎಸ್.ರವಿ, ಸೌಭಾಗ್ಯಾ, ಹಾಗೂ ದೀಪು ಅವರನ್ನು ಆಯ್ಕೆಗೊಳಿಸಿ ನಗರಾಭಿವೃದ್ಧಿ ಪ್ರಾಧಿಕಾರದ ಅಧೀನ ಕಾರ್ಯದರ್ಶಿ ಅವರ ಸೂಚನೆ ಮೇರೆಗೆ ನಂಜನಗೂಡು ಪೌರಾಯುಕ್ತ ನಂಜುಂಡಸ್ವಾಮಿ ಆದೇಶ ಹೊರಡಿಸಿದ್ದಾರೆ.

ಮಡಿವಾಳ ಕೆ.ಎಂ.ಬಸವರಾಜು ಮಾತನಾಡಿ ನಾವು ಕಾಂಗ್ರೇಸ್ ಪಕ್ಷದ ಸಕ್ರಿಯ ಸದಸ್ಯರಾಗಿದ್ದು ನಮ್ಮ ಸೇವೆಯನ್ನು ಗುರುತಿಸಿ ಮತ್ತು ಮಡಿವಾಳ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಡುವ ಸಲುವಾಗಿ ಶಾಸಕ ದರ್ಶನ್ ಧ್ರುವನಾರಾಯಣ ಮತ್ತು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರ ಸಲಹೆ ಮೇರೆಗೆ ನಗರಸಭೆಗೆ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಗೊಳಿಸಿರುವುದು ಸಂತಸ ತಂದಿದೆ. ಈ ಸದವಕಾಶವನ್ನು ಬಳಕೆ ಮಾಡಿಕೊಂಡು ನಂಜನಗೂಡಿನ ಅಭಿವೃದ್ಧಿಗೆ ಕೈ ಜೋಡಿಸಿ ಸೇವೆ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net